×
Ad

ಜನಾಂಗೀಯ ದ್ವೇಷ: ಹಿಜಾಬ್ ತೆಗೆಯಲು ಒಲ್ಲದ ಪ್ರಯಾಣಿಕೆಗೆ ವಿಮಾನ ಯಾನ ನಿರಾಕರಣೆ

Update: 2017-04-16 21:27 IST

ರೋಮ್,ಎ.16: ಮುಸ್ಲಿಂ ಪ್ರಯಾಣಿಕೆಯೊಬ್ಬರಿಗೆ ಹಿಜಾಬ್ ಕಳಚುವತೆ ವಿಮಾನ ನಿಲ್ದಾಣದ ಸಿಬ್ಬಂದಿ ಆಗ್ರಹಿಸಿದ ಘಟನೆ ರೋಂನಲ್ಲಿ ಶನಿವಾರ ವರದಿಯಾಗಿದೆ. ಕಿಯಾಂಪಿನೋ ವಿಮಾನನಿಲ್ದಾಣದಲ್ಲಿ ಈ ಘಟನೆ ವರದಿಯಾಗಿದೆ. ಇಂಡೊನೇಶ್ಯದ ಯುವತಿ ಅಗ್ನಿಯಾ ಅಝಿಕಿಯಾ ಎಂಬಾಕೆಗೆ ಹಿಜಾಬ್ ಕಳಚುವಂತೆ ಸಿಬ್ಬಂದಿ ಬಲವಂತಪಡಿಸಿದ್ದಾರೆಂದು ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ.
   
ರೋಮ್‌ನಿಂದ ಲಂಡನ್‌ಗೆ ಪ್ರಯಾಣಿಸಲಿದ್ದ ಅಗ್ನಿಯಾ ಅವರನ್ನು ಕಿಯಾಂಪಿನೋ ವಿಮಾನನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ, ತಡೆದು ಹಿಜಾಬ್ ತೆಗೆಯುವಂತೆ ಸೂಚಿಸಿದಋದು. ಆದರೆ ಅದಕ್ಕೆ ಒಪ್ಪದ ಅಗ್ನಿಯಾ ಶಿರವಸ್ತ್ರ ಧರಿಸಿದ ಸ್ತ್ರೀಯರಿಗೆ ವಿಮಾನನಿಲ್ದಾಣದಲ್ಲಿ ಪ್ರವೇಶ ನಿರ್ಬಂಧ ವಿಧಿಸಿರುವುದನ್ನು ಸೂಚಿಸುವ ಕಾನೂನಿನ ದಾಖಲೆಗಳನ್ನು ತೋರಿಸುವಂತೆ ಅಗ್ನಿಯಾ ಭದ್ರತಾ ಸಿಬ್ಬಂದಿಯಲ್ಲಿ ಆಗ್ರಹಿಸಿದ್ದಳು. ೆ

ಅದಕ್ಕೆ ಕಿವಿಗೊಡದ ಭದ್ರತಾ ಸಿಬ್ಬಂದಿ ಆಕೆ ಹಿಜಾಬ್ ಕಳಚದೆ ವಿಮಾನ ಏರಲು ಅವಕಾಶ ನೀಡುವುದಿಲ್ಲವೆಂದು ಸೂಚಿಸಿದರು. ಆನಂತರ ಮಹಿಳಾ ಭದ್ರತಾ ಸಿಬ್ಬಂದಿಯೊಬ್ಬರು ಖಾಸಗಿಕೋಣೆಗೆ ತನ್ನೊಂದಿಗೆ ಬರುವಂತೆಯೂ, ಅಲ್ಲಿ ಆಕೆಯ ಹಿಜಾಬ್‌ನ ತಪಾಸಣೆ ನಡೆಸುವುದಾಗಿಯೂ ತಿಳಿಸಿದರು. ಆದಾಗ್ಯೂ, ಅಗ್ನಿಯಾ ಹಿಜಾಬ್ ತೆಗೆಯಲು ನಿರಾಕರಿಸಿದರು ಮತ್ತು ಅನ್ಯಾಯವಾಗಿ ತನ್ನ ವಿರುದ್ಧ ಗುರಿ ಮಾಡಲಾಗಿದೆಯೆಂದು ಆಕೆ ಆಪಾದಿಸಿದರು.

‘ಕ್ರೈಸ್ತ ಸನ್ಯಾಸಿನಿಯರು ಶಿರವಸ್ತ್ರ ಧರಿಸುತ್ತಾರಾದರೂ, ಅವರ ತಪಾಸಣೆ ನಡೆಸಲಾಗುತ್ತಿದೆಯೇ ಎಂದು ಆಕೆ ಪ್ರಶ್ನಿಸಿದ್ದಾರೆ. ವಿಮಾನವೇರಲು ಅವಕಾಶ ದೊರೆಯದ ಅಗ್ನಿಯಾ, ಆನಂತರ ಆಕೆ ರೋಮ್ ನಗರದ ಇನ್ನೊಂದು ವಿಮಾನನಿಲ್ದಾಣದಲ್ಲಿ ವಿಮಾನ ಟಿಕೆಟ್ ಬುಕ್ ಮಾಡಿದರು. ಆದರೆ ಅಲ್ಲೂ ಆಕೆಗೆ ಇದೇ ಪರಿಸ್ಥಿತಿಯುಂಟಾಯಿತು ಕೊನೆಗೆ ಹಿಜಾಬ್ ತೆಗೆಯಲು ಸಮ್ಮತಿಸಿದ ಬಳಿಕವಷ್ಟೇ ಆಕೆಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಯಿತೆಂದು ಆಕೆ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News