ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ: ಕಾರ್ತಿ ಚಿದಂಬರಂಗೆ ಇಡಿ ನೋಟಿಸ್
Update: 2017-04-17 14:56 IST
ಹೊಸದಿಲ್ಲಿ,ಎ.17: 45 ಕೋ.ರೂ.ಗಳನ್ನೊಳಗೊಂಡ ಪ್ರಕರಣವೊಂದರಲ್ಲಿ ಫೆಮಾ ಕಾಯ್ದೆಯ ಉಲ್ಲಂಘನೆ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಮತ್ತು ಅವರೊಂದಿಗೆ ನಂಟು ಹೊಂದಿರುವ ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಪ್ರೈ.ಲಿ.ಕಂಪನಿಗೆ ಶೋ ಕಾಸ್ ನೋಟಿಸ್‌ನ್ನು ಹೊರಡಿಸಿದೆ.
ಎರಡು ವರ್ಷಗಳ ತನಿಖೆಯ ಬಳಿಕ ಇಡಿ ಚೆನ್ನೈ ಮೂಲದ ಇನ್ನೊಂದು ಸಂಸ್ಥೆ ವಾಸನ್ ಹೆಲ್ತ್ ಕೇರ್ ಪ್ರೈ.ಲಿ.ಗೂ 2,262 ಕೋ.ರೂ.ಗಳ ವಿದೇಶಿ ವಿನಿಮಯ ಉಲ್ಲಂಘನೆ ಆರೋಪದಲ್ಲಿ ಇಂತಹುದೇ ನೊಟೀಸನ್ನು ಹೊರಡಿಸಿದೆ.