×
Ad

ಮಲ್ಯರಿಗೆ ಷರತ್ತುಬದ್ಧ ಜಾಮೀನು

Update: 2017-04-18 16:59 IST

ಲಂಡನ್‌, ಎ.18: ವಿವಿಧ ಬ್ಯಾಂಕ್‌ಗಳಿಂದ ಕೋಟಿಗಟ್ಟಲೆ ಸಾಲ ಪಡೆದು  ಮರುಪಾವತಿ ಮಾಡದೆ ವಂಚಿಸಿ ಲಂಡನ್ ಗೆ ಪರಾರಿಯಾಗಿದ್ದ ಮದ್ಯದ ದೊರೆ ವಿಜಯ ಮಲ್ಯರಿಗೆ ಲಂಡನ್ ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯ  ಷರತ್ತುಬದ್ಧ ಜಾಮೀನು ನೀಡಿದೆ.

ವಿಜಯ ಮಲ್ಯರನ್ನು ವೆಸ್ಟ್  ಸ್ಕಾಟ್ ಲ್ಯಾಂಡ್‌ ಪೊಲೀಸರು ಬಂಧಿಸಿ ವೆಸ್ಟ್ ಮಿನಿಸ್ಟರ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಭಾರತ-ಇಂಗ್ಲೆಂಡ್‌ ಎಂಎಲ್ ‌ಎಟಿ ಒಪ್ಪಂದದ ಪ್ರಕಾರ ಮಲ್ಯ ಬಂಧನವಾಗಿತ್ತು.ಆದರೆ ಬಂಧನವಾಗಿ ಮೂರು ಗಂಟೆಗಳ ಒಳಗಾಗಿ ಮಲ್ಯ ಬಿಡುಗಡೆಯಾಗಿದ್ದಾರೆ.

ಐಡಿಬಿಐ ಪ್ರಕರಣದಲ್ಲಿ ಮಲ್ಯ ಬಂಧನವಾಗಿತ್ತು. ಮಲ್ಯ ಬಿಡುಗಡೆಗೊಂಡ ಬೆನ್ನೆಲ್ಲೇ ಭಾರತದ ಮಾಧ್ಯಮಗಳ ವಿರುದ್ಧ ಗುಡುಗಿದ್ದಾರೆ.ಮಲ್ಯರನ್ನು ವಿಚಾರಣೆಗೆ ಭಾರತಕ್ಕೆ ಹಸ್ತಾಂತರ ಮಾಡುವ ಬಗ್ಗೆ ಲಂಡನ್ ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯದಲ್ಲಿ ಇಂದಿನಿಂದ ವಿಚಾರಣೆ ಆರಂಭಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News