ಜೂ. 8 : ಬ್ರಿಟನ್‌ನಲ್ಲಿ ಚುನಾವಣೆ
Update: 2017-04-18 21:12 IST
ಲಂಡನ್, ಎ. 18: ಸಂಸದೀಯ ಚುನಾವಣೆಯನ್ನು ಜೂನ್ 8ರಂದು ನಡೆಸುವುದಾಗಿ ಬ್ರಿಟನ್ ಪ್ರಧಾನಿ ತೆರೇಸಾ ಮೇ ಮಂಗಳವಾರ ಘೋಷಿಸಿದ್ದಾರೆ.
‘‘ಈಗ ನಾವು ಚುನಾವಣೆ ನಡೆಸದಿದ್ದರೆ ರಾಜಕೀಯ ಕಾಲೆಳೆಯುವ ಆಟ ಮುಂದುವರಿಯುತ್ತದೆ. ಹಾಗೂ ಐರೋಪ್ಯ ಒಕ್ಕೂಟದೊಂದಿಗಿನ ಮಾತುಕತೆ ಕಷ್ಟಕರ ಹಂತ ತಲುಪುತ್ತದೆ. ನಮಗೆ ಚುನಾವಣೆ ಬೇಕು ಹಾಗೂ ಇದು ಈಗಲೇ ನಡೆಯಬೇಕು’’ ಎಂದು ಅವರು ಹೇಳಿದರು.
ಬ್ರೆಕ್ಸಿಟ್ ಮಾತುಕತೆಯನ್ನು ಮುಂದುವರಿಸಲು ತೆರೇಸಾ ತನ್ನದೇ ಆದ ಜನಾದೇಶವನ್ನು ಪಡೆಯಲು ಬಯಸಿದ್ದಾರೆ.