ಕೆಂಪು ಗೂಟ ನಿಷೇಧಿಸಿದ ಕೇಂದ್ರ ಸರ್ಕಾರ : ಈ ಐದು ಮಂದಿಗೆ ಮಾತ್ರ ಬಳಕೆಗೆ ಅವಕಾಶ

Update: 2017-04-19 08:52 GMT

ಹೊಸದಿಲ್ಲಿ,ಎ.19: ಬುಧವಾರ ನಡೆದ ಸಂಪುಟ ಸಭೆಯಲ್ಲಿ ದೇಶದಲ್ಲಿ ವಿವಿಐಪಿ ಸಂಸ್ಕೃತಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಮೇ 1ರಿಂದ ವಾಹನಗಳ ಮೇಲೆ ಕೆಂಪುದೀಪ ಬಳಕೆಯನ್ನು ನಿಷೇಧಿಸಿದ್ದು, ಐವರು ಗಣ್ಯರು ಮಾತ್ರ ಅದನ್ನು ಬಳಸಬಹು ದಾಗಿದೆ.

ನಿರ್ಧಾರವು ಅನುಷ್ಠಾನಗೊಂಡ ಬಳಿಕ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಭಾರತದ ಮುಖ್ಯ ನ್ಯಾಯಾಧೀಶರು ಮತ್ತು ಲೋಕಸಭಾ ಸ್ಪೀಕರ್ ಮಾತ್ರ ತಮ್ಮ ವಾಹನಗಳ ಮೇಲೆ ಕೆಂಪುದೀಪವನ್ನು ಬಳಸಬಹುದು.

ಪ್ರಧಾನ ಮಂತ್ರಿಗಳು ವಾಹನದ ಮೇಲೆ ಕೆಂಪುದೀಪವನ್ನು ಬಳಸಬಹುದಾದರೂ ಇತರರಿಗೆ ಮಾದರಿಯಾಗುವ ನಿಟ್ಟಿನಲ್ಲಿ ಅದನ್ನು ಸ್ವತಃ ಬಳಸದಿರಲು ಮೋದಿಯವರು ನಿರ್ಧರಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

 ಇನ್ನೊಂದು ಪ್ರಮುಖ ನಿರ್ಧಾರದಲ್ಲಿ ಸಂಪುಟ ಸಭೆಯು ಮತದಾನ ದೃಢೀಕರಣ ಯಂತ್ರ (ವಿವಿಪಿಎಟಿ)ಗಳನ್ನು ಖರೀದಿಸುವ ಚುನಾವಣಾ ಆಯೋಗದ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ. ಈ ಯಂತ್ರಗಳನ್ನು 2019ರ ಲೋಕಸಭಾ ಚುನಾವಣೆಗಳಲ್ಲಿ ಬಳಸಲು ಆಯೋಗವು ಉದ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News