×
Ad

ಟೋಲ್ ಪ್ಲಾಝಾ ನೌಕರನಿಗೆ ಥಳಿಸಿದ ಬಿಜೆಪಿ ಶಾಸಕ

Update: 2017-04-20 16:29 IST

ಬರೇಲಿ, ಎ. 20: ಟೋಲ್ ಪ್ಲಾಝಾದ ನೌಕರನಿಗೆ ಉತ್ತರಪ್ರದೇಶದ ಬಿಜೆಪಿ ಶಾಸಕ ಹೊಡೆಯುತ್ತಿರುವ ದೃಶ್ಯ ವ್ಯಾಪಕ ಟೀಕೆಗೆ ಆಹಾರವಾಗಿದೆ.ಬರೇಲಿ ಶಾಸಕ ಮಹೇಂದ್ರ ಯಾದವ್‌ಟೋಲ್ ಪ್ಲಾಝಾದ ನೌಕರರಿಗೆ ಹೊಡೆದಿದ್ದಾರೆ.

ಮೊರಾದಾಬದ್-ಬರೇಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಪ್ಲಾಝಾದಲ್ಲಿ ಘಟನೆ ನಡೆದಿದೆ. ತನ್ನ ಸಂಗಡಿಗರ ವಾಹನಗಳಿಗೆ ಟೋಲ್ ನೌಕರ ಟೋಲ್ ಕೇಳಿದ್ದು ಶಾಸಕರ ಕೋಪಕ್ಕೆ ಕಾರಣವಾಗಿತ್ತು.

ಮಹೇಂದ್ರ ಯಾದವ್ ಟೋಲ್ ಪ್ಲಾಝಾ ಉದ್ಯೋಗಿಗೆ ಹೊಡೆಯುತ್ತಿರುವುದು ವೀಡಿಯೊದಲ್ಲಿ ಕಾಣಿಸುತ್ತಿದೆ. ಶಾಸಕರ ಜೊತೆಯಲ್ಲಿದ್ದವರೂ ಆತನಿಗೆ ಹೊಡೆಯುತ್ತಿದ್ದಾರೆ.ಟೋಲ್‌ಪ್ಲಾಝಾದ ಬಾರಿಯರ್‌ನ್ನು ಇವರು ಧ್ವಂಸಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News