ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಕ್ಷುಲ್ಲಕ ಕಾರಣಕ್ಕೆ ತಾಯಿ,ಮಗಳಿಗೆ ಹೊಡೆದ ಮಹಿಳಾ ಸುರಕ್ಷಾ ಉದ್ಯೋಗಿ!
ಇಸ್ಲಾಮಾಬಾದ್,ಎ. 20: ಪಾಕಿಸ್ತಾನದ ಇಸ್ಲಾಮಾಬಾದ್‌ನ ಬೆನಝೀರ್ ಭುಟ್ಟೋ ವಿಮಾನನಿಲ್ದಾಣದಲ್ಲಿ ಟಿಶ್ಯೂ ಪೇಪರ್ ಕೇಳಿದ್ದಕ್ಕೆ ತಾಯಿ- ಮಗಳಿಗೆ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಯೊಬ್ಬಳು ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿದೆ. ಥಳಿಸುತ್ತಿರುವ ಮಹಿಳೆ ಪಾಕಿಸ್ತಾನ ಭದ್ರತಾ ಏಜೆನ್ಸಿ ಫೆಡರಲ್ ಇನ್ವೆಸ್ಟಿಂಗ್ ಏಜೆನ್ಸಿ(ಎಫ್‌ಐಎ) ಉದ್ಯೋಗಿಯಾಗಿದ್ದಾಳೆ.
ವೀಡಿಯೊದಲ್ಲಿ ತಾಯಿಮಗಳು ತಮಗೆ ನೆರವಾಗುವಂತೆ ಅಲ್ಲಿದ್ದ ಜನರನ್ನು ಕೇಳಿಕೊಂಡಿದ್ದಾರೆ. ಆದರೆ ಯಾರೂ ಅವರ ನೆರವಿಗೆ ಹೋಗಿಲ್ಲ. ಬದಲಾಗಿ ಅವರು ಹೊಡೆತ ತಿನ್ನುತ್ತಿರುವುದನ್ನು ವೀಡಿಯೊ ಚಿತ್ರೀಕರಿಸುತ್ತಿದ್ದರು. ನಂತರ ಈ ವೀಡಿಯೊವನ್ನು ಸೋಶಿಯಲ್ ಸೈಟ್ಸ್‌ಗೆ ಅಪ್‌ಲೋಡ್ ಮಾಡಲಾಗಿದೆ.
ವೀಡಿಯೊ ವೈರಲ್ ಆಗಿ ಅದು ಎಫ್ ಐಎ ಬಳಿಗೂ ತಲುಪಿತು. ಕೂಡಲೇ ನಿರ್ದಯವಾಗಿಹೊಡೆದ ಮಹಿಳಾ ಅಧಿಕಾರಿಯನ್ನು ಎಫ್‌ಐಎ ಕೆಲಸದಿಂದ ಅಮಾನತು ಮಾಡಿದೆ. ಇತ್ತೀಚೆಗೆಇಸ್ಲಾಮಾಬಾದ್ ಏರ್‌ಪೋರ್ಟ್‌ನಲ್ಲಿ ಇಂತಹದ್ದೇ ಇನ್ನೊಂದು ಘಟನೆ ನಡೆದಿತ್ತು. ಅಂದು ಇಬ್ಬರು ನೈಜೀರಿಯನ್ ಮಹಿಳೆಯರನ್ನು ಟಿಶ್ಯೂ ಪೇಪರ್ ಕೇಳಿದ್ದಕ್ಕೆ ವಿಮಾನ ನಿಲ್ದಾಣದ ಭದ್ರತಾಉದ್ಯೋಗಿ ನಿರ್ದಯವಾಗಿ ಥಳಿಸಿದ್ದನು.