ಪಿಎಫ್‌ನ ಶೇ.8.5 ಬಡ್ಡಿದರವನ್ನು ಸ್ಥಿರೀಕರಿಸಿದ ವಿತ್ತ ಸಚಿವಾಲಯ
Update: 2017-04-20 21:35 IST
ಹೊಸದಿಲ್ಲಿ,ಎ.20: 2016-17ನೇ ಸಾಲಿಗೆ ನೌಕರರ ಭವಿಷ್ಯನಿಧಿ (ಇಪಿಎಫ್)ಗೆ ಶೇ.8.65 ಬಡ್ಡಿದರವನ್ನು ವಿತ್ತ ಸಚಿವಾಲಯವು ಸ್ಥಿರೀಕರಿಸಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ಗುರುವಾರ ಇಲ್ಲಿ ತಿಳಿಸಿದರು.
ಇದರಿಂದಾಗಿ ಭವಿಷ್ಯನಿಧಿ ಸಂಸ್ಥೆಯು ತನ್ನ ನಾಲ್ಕು ಕೋಟಿ ಚಂದಾದಾರರ ಖಾತೆಗಳಿಗೆ ಶೇ.8.65 ಬಡ್ಡಿಯನ್ನು ಜಮಾ ಮಾಡಲು ಮಾರ್ಗವನ್ನು ಸುಗಮಗೊಂಡಿದೆ.
ತಕ್ಷಣವೇ ಅಧಿಸೂಚನೆಯನ್ನು ಹೊರಡಿಸಲಾಗುವುದು ಮತ್ತು ಚಂದಾದಾರರ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡಲಾಗುವುದು ಎಂದು ಬಂಡಾರು ತಿಳಿಸಿದರು.
ಇಪಿಎಫ್‌ಗೆ ಶೇ.8.5 ಬಡ್ಡಿಯನ್ನು ನೀಡಲು ನೌಕರರ ಭವಿಷ್ಯನಿಧಿ ಸಂಸ್ಥೆಯ ವಿಶ್ವಸ್ಥ ಮಂಡಳಿಯು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಒಪ್ಪಿಗೆ ನೀಡಿತ್ತು.