ಅಕ್ರಮ ಗೋ ಸಾಗಣೆ: ನಾಲ್ವರ ಸೆರೆ
Update: 2017-04-20 21:44 IST
ಜೈಪುರ, ಎ.20: ರಾಜಸ್ತಾನದ ಭರತ್‌ಪುರದಿಂದ ಹರ್ಯಾನಾದ ಕಸಾಯಿಖಾನೆಗೆ ಅಕ್ರಮವಾಗಿ 63 ಗೋವುಗಳನ್ನು ಸಾಗಿಸಲು ಯತ್ನಿಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ತಾನದ ಬೊಲ್‌ಖೆಡಾ ಗ್ರಾಮದ ಗುತ್ತಿ ಗುರ್ಜಾರ್ ಮತ್ತು ಆತನ ಮೂವರು ಪುತ್ರರಾದ ಕನಯ್ಯ ಗುರ್ಜಾರ್, ಮೆಮಲ್ ಗುರ್ಜಾರ್ ಮತ್ತು ನಂದನ್ ಗುರ್ಜಾರ್ ಬಂಧಿತರು. ಅಜ್ಮೀರ್‌ನ ಕಿಶನ್‌ಗಂಜ್ ಪ್ರದೇಶದಿಂದ ಹರ್ಯಾನಾದ ಕಸಾಯಿಖಾನೆಗೆ ಗೋವುಗಳನ್ನು ಸಾಗಿಸಲು ಇವರು ಮುಂದಾಗಿದ್ದರು ಎಂದು ಪೊಲೀಸರುನ ತಿಳಿಸಿದ್ದಾರೆ.
ತಮ್ಮ ಗೋವುಗಳನ್ನು ಮುಸ್ಲಿಂ ಜಾನುವಾರು ವ್ಯಾಪಾರಿಗಳಿಗೆ ಮಾರಾಟ ಮಾಡದಂತೆ ಹಿಂದೂಗಳನ್ನು ಒತ್ತಾಯಿಸಿದ್ದೇವೆ. ಗೋ ಹತ್ಯೆ ನಿಲ್ಲಿಸುವ ಉದ್ದೇಶದಿಂದ ಎಪ್ರಿಲ್ 22ರಂದು ಗುಲ್ಪಾಡಾ ಗ್ರಾಮದಲ್ಲಿ ಸಭೆ ನಡೆಯಲಿದೆ. ಈ ಪ್ರದೇಶದಲ್ಲಿರುವ ಶೇ.30ರಿಂದ 40ರಷ್ಟು ಅಕ್ರಮ ಗೋಸಾಗಣೆದಾರರು ಹಿಂದೂ ಧರ್ಮೀಯರು ಎಂದು ಮಾಜಿ ಶಾಸಕ ಮುಹಮ್ಮದ್ ಜಹುರ್‌ಖಾನ್ ತಿಳಿಸಿದ್ದಾರೆ.