ಪ್ರಮುಖ ಜಲಾಶಯಗಳಲ್ಲಿ ಸಾಮರ್ಥ್ಯದ ಶೇ.29ರಷ್ಟು ನೀರಿನ ಮಟ್ಟ ಸಂಗ್ರಹ

Update: 2017-04-21 13:02 GMT

 ಹೊಸದಿಲ್ಲಿ, ಎ.21: ದೇಶದ 91 ಪ್ರಮುಖ ಜಲಾಶಯಗಳಲ್ಲಿ ಒಟ್ಟು ಸಂಗ್ರಹಣಾ ಸಾಮರ್ಥ್ಯದ ಶೇ.29ರಷ್ಟು ನೀರಿನ ಸಂಗ್ರಹ ಇದೆ ಎಂದು ಸರಕಾರ ತಿಳಿಸಿದೆ.

ಎ.20ಕ್ಕೆ ಅನ್ವಯಿಸುವಂತೆ, ಈ ಜಲಾಶಯಗಳಲ್ಲಿ ಒಟ್ಟು 46.02 ಬಿಲಿಯನ್ ಕ್ಯೂಬಿಕ್ ಮೀಟರ್(ಬಿಸಿಎಂ) ನೀರು ಲಭ್ಯವಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಮೂಲಗಳು ತಿಳಿಸಿವೆ.ಕಳೆದ ವಾರ ಈ ಜಲಾಶಯಗಳ ನೀರಿನ ಮಟ್ಟ 48.42 ಬಿಸಿಎಂ ಆಗಿತ್ತು. 2017ರ ಎಪ್ರಿಲ್ 20ರಂದು ಇದ್ದ ನೀರಿನ ಮಟ್ಟವು 2015-16ರ ಇದೇ ಅವಧಿಯಲ್ಲಿದ್ದ ಸಂಗ್ರಹಣಾ ಮಟ್ಟದ ಶೇ.133ರಷ್ಟು ಆಗಿದೆ . ಅಲ್ಲದೆ ಕಳೆದ 10 ವರ್ಷಗಳ ಸರಾಸರಿ ಸಂಗ್ರಹಣೆಯ ಶೇ.106ರ ಪ್ರಮಾಣದಲ್ಲಿ ಜಲಸಂಗ್ರಹವಿದೆ ಎಂದು ಮೂಲಗಳು ತಿಳಿಸಿವೆ.

 ಕರ್ನಾಟಕ, ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶ, ತ್ರಿಪುರ ಮತ್ತು ಆಂಧ್ರಪ್ರದೇಶ - ಈ ಆರು ರಾಜ್ಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಪಂಜಾಬ್, ರಾಜಸ್ತಾನ್, ಜಾರ್ಖಂಡ್, ಒಡಿಶಾ, ಪ.ಬಂಗಾಲ, ಗುಜರಾತ್, ಮಹಾರಾಷ್ಟ್ರ, ಉ.ಪ್ರದೇಶ, ಉತ್ತರಾಖಂಡ್, ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಮಟ್ಟ ಅಧಿಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News