ಅಮೆರಿಕ : ಮಗುವಿಗೆ ‘ಅಲ್ಲಾ’ ಹೆಸರಿಡಲು ಅನುಮತಿ

Update: 2017-04-21 15:03 GMT

ಅಟ್ಲಾಂಟ (ಅಮೆರಿಕ), ಎ. 21: ಕೊನೆಯ ಹೆಸರು ‘ಅಲ್ಲಾ’ ಎಂದಿರುವ ಮಗುವಿಗೆ ಅಮೆರಿಕದ ಜಾರ್ಜಿಯ ರಾಜ್ಯ ಕೊನೆಗೂ ಜನನ ಪ್ರಮಾಣಪತ್ರವನ್ನು ನೀಡಿದೆ.
ಇದಕ್ಕೂ ಮುನ್ನ, ಈ ಹೆಸರು ಹೆತ್ತವರ ಕೊನೆಯ ಹೆಸರುಗಳಿಗೆ ಹೋಲಿಕೆಯಾಗುವುದಿಲ್ಲ ಎಂದು ಹೇಳಿ ಪ್ರಮಾಣಪತ್ರ ನೀಡಲು ಅದು ನಿರಾಕರಿಸಿತ್ತು.

ಹೆತ್ತವರಾದ ಎಲಿಝಬೆತ್ ಹ್ಯಾಂಡಿ ಮತ್ತು ಬಿಲಾಲ್ ವಾಕ್ ತಮ್ಮ ಹೆಣ್ಣು ಮಗುವಿಗೆ ಝಲೈಕಾ ಗ್ರೇಸ್‌ಫುಲ್ ಲೊರೈನ ಅಲ್ಲಾ ಎಂಬ ಹೆಸರನ್ನು ಇಟ್ಟಿದ್ದರು. ಅವರ ಪರವಾಗಿ ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ ಆಫ್ ಜಾರ್ಜಿಯ ಕಳೆದ ತಿಂಗಳು ಜಾರ್ಜಿಯ ರಾಜ್ಯದ ವಿರುದ್ಧ ಮೊಕದ್ದಮೆ ಹೂಡಿತ್ತು.

ಹೆತ್ತವರ ಆಯ್ಕೆಯ ಹೆಸರಿನಲ್ಲಿ ಜನ್ಮ ಪ್ರಮಾಣಪತ್ರವನ್ನು ಜಾರ್ಜಿಯ ಆರೋಗ್ಯ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ಮೊಕದ್ದಮೆಯನ್ನು ಕೈಬಿಡುವುದಾಗಿ ಸಂಘಟನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News