ಅಫ್ಘಾನಿಸ್ತಾನದ ಸೇನಾ ಶಿಬಿರದ ಮೇಲೆ ಉಗ್ರರ ಗುಂಡಿನ ದಾಳಿ ; ಐವತ್ತಕ್ಕೂ ಅಧಿಕ ಯೋಧರ ಸಾವು

Update: 2017-04-22 05:02 GMT

ಕಾಬುಲ್, ಎ.22:  ಉಗ್ರರ ಅಟ್ಟಹಾಸದಿಂದ ತತ್ತರಿಸಿರುವ ಅಫ್ಘಾನಿಸ್ಥಾನದಲ್ಲಿ ಸೇನಾ ಶಿಬಿರದ ಮೇಲೆ ತಾಲಿಬಾನ್ ಉಗ್ರರು ಶುಕ್ರವಾರ ನಡೆಸಿದ ದಾಳಿಯಲ್ಲಿ ಐವತ್ತಕ್ಕೂ ಅಧಿಕ ಸೈನಿಕರು ಮೃತಪಟ್ಟಿದ್ದಾರೆ.  ಮಜರ್ ಇ ಷರೀಫ್ ನಗರದ ಉತ್ತರ ಭಾಗದಲ್ಲಿರುವ ಸೇನಾ ಕ್ಯಾಂಪ್ ಮೇಲೆ ಸುಮಾರು 10 ಮಂದಿ ತಾಲಿಬಾನ್ ಉಗ್ರರು ಮನಸೋ ಇಚ್ಝೆ ಗುಂಡಿನ ಸುರಿಮಳೆ ಗರೆದಿದ್ದಾರೆ. ಆಫ್ಘಾನಿಸ್ತಾನ ಸೇನಾ  ಸಮವಸ್ತ್ರ ಧರಿಸಿದ್ದ ಉಗ್ರರು ಸೇನಾ ಕ್ಯಾಂಪ್ ಪ್ರವೇಶಿಸಿ ಗುಂಡಿನ ಮಳೆಗರೆದರು ಎಂದು ತಿಳಿದು ಬಂದಿದೆ. 
ಕ್ಯಾಂಪ್ ನಲ್ಲಿದ್ದ ಅಫ್ಘಾನಿಸ್ತಾನದ  ಸೈನಿಕರು ಉಗ್ರರ ಮೇಲೆ ಪ್ರತಿದಾಳಿ ನಡೆಸಿದರೂ  ಉಗ್ರರನ್ನು ಮಟ್ಟಹಾಕಲು ಸಾಧ್ಯವಾಗಲ್ಲಿಲ್ಲ. ಕ್ಯಾಂಪ್ ಆಯಕಟ್ಟಿನ ಪ್ರದೇಶದಲ್ಲಿ ಅವಿತಿದ್ದ ಉಗ್ರರು ಗುಂಡಿನ ಮಳೆ ಗರೆದರು. ಇದರಿಂದಾಗಿ ಅಪಾರ ಪ್ರಮಾಣದ ಸಾವುನೋವು ಸಂಭವಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 
ಇದೇ ವೇಳೆ ಅಮೆರಿಕದ ನ್ಯಾಟೋ ಪಡೆಗಳು ಸ್ಥಳಕ್ಕೆ ದೌಡಾಯಿಸಿದ್ದು, ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಏಳು ಮಂದಿ ಉಗ್ರರನನ್ನು ಕೊಲ್ಲಲಾಗಿದೆ. ಓರ್ವನನ್ನು ಸೆರೆ ಹಿಡಿಯಲಾಗಿದೆ. ಎಂದು ತಿಳಿದು ಬಂದಿದೆ. ಅವಿತಿರುವ  ಉಗ್ರರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News