ಬಲೂಚಿಸ್ತಾನದಲ್ಲಿ 400ಕ್ಕೂ ಹೆಚ್ಚು ಉಗ್ರರು ಶರಣು

Update: 2017-04-22 05:47 GMT

ಕ್ವೆಟ್ಟಾ, ಎ.22: ಪಾಕ್  ಆಕ್ರಮಿತ ಬಲೂಚಿಸ್ತಾನದಲ್ಲಿ ವಿವಿಧ ಭಯೋತ್ಪಾದನಾ ಸಂಘಟನೆಗಳಿಗೆ ಸೇರಿದ 434ಕ್ಕೂ ಹೆಚ್ಚು ಉಗ್ರರು ಶನಿವಾರ ಶರಣಾಗಿದ್ದಾರೆ.
ಬಲೂಚ್ ರಿಪಬ್ಲಿಕನ್ ಆರ್ಮಿ (ಬಿಆರ್'ಎ), ಬಲೂಚ್ ಲಿಬರೇಷನ್ ಆರ್ಮಿ ಮತ್ತು ಇತರೆ ಪ್ರತ್ಯೇಕತಾವಾದಿಗಳ ಸಂಘಟನೆಗಳಿಗೆ ಸೇರಿದ 434ಕ್ಕೂ ಅಧಿಕ  ಉಗ್ರರು ತಮ್ಮ ಶಸ್ತ್ರಾಸ್ತ್ರಗಳನ್ನು ಅಧಿಕಾರಿಗಳ ವಶಕ್ಕೆ ಒಪ್ಪಿಸಿ ಶರಣಾಗಿದ್ದಾರೆಂದು ಲೆಫ್ಟಿನೆಂಟ್ ಜನರಲ್ ಆಮಿರ್ ರಿಯಾಝ್ ಅವರು ತಿಳಿಸಿದ್ದಾರೆ.
ಸರಕಾರದ ಬಳಿ ಶರಣಾಗಿ ಸಾಮಾನ್ಯ ಜೀವನ ನಡೆಸಲು ನಿರ್ಧಾರ ಕೈಗೊಂಡವರನ್ನು ಸ್ವಾಗತಿಸುತ್ತೇವೆಂದು ಅವರು  ಹೇಳಿದ್ದಾರೆ. 
 "ಇದೇ ಉಗ್ರರು ನನ್ನ ಪುತ್ರನನ್ನುಮತ್ತು ಸಹೋದರನನ್ನು ಹತ್ಯೆ ಮಾಡಿದ್ದರು. ಆದರೆ ನಾನು ಅವರನ್ನು  ಕ್ಷಮಿಸುವೆನು. ರಾಜ್ಯ ಸರಕಾರ ಅವರನ್ನು ಕ್ಷಮಿಸಿದೆ. ಬಲೋಚಿಸ್ತಾನದ ಸಿಪಿಇಸಿ ಯೋಜನೆಯಡಿ ಶರಣಾಗುವ ಉಗ್ರರನ್ನು ಸ್ವಾಗತಿಸುವುದಾಗಿ  ಬಲೂಚಿಸ್ತಾನದ ಮುಖ್ಯಮಂತ್ರಿ ಸನವುಲ್ಲಾ ಝಾಹ್ರಿ  ಅಭಿಪ್ರಾಯಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News