ಕೋಮಾವಸ್ಥೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ !

Update: 2017-04-22 09:46 GMT

ಬ್ಯೂನಸ್ ಐರಿಸ್, ಎ. 22: ತನ್ನ ಮಗುವನ್ನೆ ನೋಡಲು ನಾಲ್ಕು ತಿಂಗಳು ಈ ತಾಯಿಗೆ ಬೇಕಾಯಿತು. ಅರ್ಜಂಟಿನದ ಸಿಟಿ ಆಫ್ ಪೊಸಡಸ್‌ನ ಪೊಲೀಸ್ ಅಧಿಕಾರಿಣಿ ಅಮೆಲಿಯ ಬೆನ್ನಾನ್ ಎನ್ನುವ 34 ವರ್ಷದ ಮಹಿಳೆ ತನಗೆ ಜನಿಸಿದ ಮಗನನ್ನು ನಾಲ್ಕು ತಿಂಗಳ ಬಳಿಕ ಮೊದಲ ಬಾರಿ ನೋಡಿದ್ದಾರೆ. ಬೆನ್ನನ್ ಮತ್ತು ಅವರ ಪತಿ ಹಾಗೂ ಇನ್ನೊಬ್ಬ ಪೊಲೀಸಧಿಕಾರಿ 2016 ನವೆಂಬರ್‌ನಲ್ಲಿ ಇಲಾಖೆ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಅಮೆಲಿಯ ಬೆನ್ನನ್‌ರ ತಲೆಗೆ ಗಂಭೀರ ಏಟಾಗಿದ್ದು, ಅವರು ಕೋಮಾವಸ್ಥೆಯಲ್ಲಿದ್ದರು. ಈ ವೇಳೆ ಬೆನ್ನನ್ ಗರ್ಭಿಣಿಯಾಗಿದ್ದರು.

ನಂತರ ಅವರನ್ನು ಪೊಸಾಡಸ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕ್ರಿಸ್‌ಮಸ್‌ನಂದು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೆರಿಗೆ ನಡೆಸಿದ್ದಾರೆ. ಆರೋಗ್ಯವಂತ ಗಂಡು ಮಗುವಿಗೆ ಅಮೆಲಿಯ ಬೆನ್ನನ್ ಜನ್ಮ ನೀಡಿದ್ದರು. ಮಗುವಿಗೆ ಸಾಂಟಿನೊ ಎಂದು ಹೆಸರಿಡಲಾಗಿದೆ. ಎಳೆ ಕೂಸನ್ನು ಅಮೆಲಿಯ ಬೆನ್ನನ್‌ರ ಸಹೋದರಿ ಸಾಕಿದರು. . ಇತ್ತೀಚೆಗೆ ಬೆನ್ನನ್‌ರಿಗೆ ಪ್ರಜ್ಞೆ ಮರಳಿದಾಗ ಅವರ ಮಗುವಿಗೆ ನಾಲ್ಕು ತಿಂಗಳು ವಯಸ್ಸು. ಪ್ರಜ್ಞೆ ಬಂದ ಮೊದಲಲ್ಲಿ ಏನೋನೊ ಮಾತಾಡುತ್ತಿದ್ದ ಬೆನ್ನನ್ ನಂತರ ನಿಧಾನವಾಗಿ ಚೇತರಿಸಿಕೊಂಡು ಎಲ್ಲರನ್ನೂ ಗುರುತಿಸಲು ಆರಂಭಿಸಿದರು. ನಂತರ ಅವರ ಮಗುವನ್ನು ಅವರಿಗೆ ತೋರಿಸಲಾಯಿತು. ಆದರೆ ಕುಟುಂಬದಲ್ಲಿ ಯಾರದೋ ಮಗು ಎಂದು ಭಾವಿಸಿದ್ದ ಅಮೆಲಿಯ ಬೆನ್ನನ್‌ರಿಗೆ ನಂತರ ವಿಷಯವನ್ನು ಮನವರಿಕೆ ಮಾಡಿಕೊಡಲಾಯಿತು. ಈ ತಾಯಿತನ್ನದೇ ಮಗುವನ್ನು ಗುರುತಿಸುವಾಗ ತನಗೆ ಹೆರಿಗೆಯಾಗಿ ನಾಲ್ಕು ತಿಂಗಳು ಕಳೆದಿತ್ತು. ಅಮೇಲಿಯ ಬೆನ್ನನ್‌ರಿಗೆ ಪ್ರಜ್ಞೆ ಮರಳಿದ್ದರೂ ಸಂಪೂರ್ಣ ಗುಣಮುಖರಾಗಿಲ್ಲ. ಚಿಕಿತ್ಸೆ ಮುಂದುವರಿಯುತ್ತಿದೆ ಎಂದು ನ್ಯೂರೊ ಸರ್ಜನ್ ಮಾರ್ಕಲೊ ಫರೆರೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News