ಅಮೆರಿಕ ವಿಮಾನದಲ್ಲಿ ಘರ್ಷಣೆ: ಉದ್ಯೋಗಿ ಅಮಾನತು

Update: 2017-04-22 16:21 GMT

ವಾಶಿಂಗ್ಟನ್, ಎ. 22: ತನ್ನ ವಿಮಾನವೊಂದರಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದ ವೀಡಿಯೊವೊಂದು ಬಹಿರಂಗಗೊಂಡ ಬಳಿಕ ಅಮೆರಿಕನ್ ಏರ್‌ಲೈನ್ಸ್ ತನ್ನ ಓರ್ವ ಉದ್ಯೋಗಿಯನ್ನು ಅಮಾನತುಗೊಳಿಸಿದೆ.

ವಿಮಾನದ ಓರ್ವ ಉದ್ಯೋಗಿಯು ಮಹಿಳೆಯೋರ್ವರಿಂದ ಸ್ಟ್ರಾಲರ್ (ಚಿಕ್ಕ ಮಕ್ಕಳನ್ನು ಕರೆದೊಯ್ಯುವ ಮೂರು ಅಥವಾ ನಾಲ್ಕು ಚಕ್ರಗಳುಳ್ಳ ಸಣ್ಣ ಗಾಡಿ)ನ್ನು ರಭಸದಿಂದ ಎಳೆದುಕೊಂಡು ಅದರಿಂದ ಆಕೆಗೆ ಹೊಡೆದಿದ್ದಾನೆ ಹಾಗೂ ಈ ಹೊಡೆತದಿಂದ ಮಗು ಸ್ವಲ್ಪದರಲ್ಲೇ ಪಾರಾಗಿದೆ ಎಂದು ಫೇಸ್‌ಬುಕ್ ಬಳಕೆದಾರ ಸುರೈನ್ ಅಡ್ಯಂತಾಯ ತನ್ನ ಫೇಸ್‌ಬುಕ್ ಸಂದೇಶದಲ್ಲಿ ಶುಕ್ರವಾರ ಹೇಳಿದ್ದಾರೆ. ಅದರ ಜೊತೆಗೇ ಅವರು ವೀಡಿಯೊವನ್ನೂ ಹಾಕಿದ್ದಾರೆ.

ಇದನ್ನು ಸಹ ಪ್ರಯಾಣಿಕರೊಬ್ಬರು ಪ್ರಶ್ನಿಸಿದ್ದಾರೆ. ವಿಮಾನ ಸಿಬ್ಬಂದಿ ಮತ್ತು ಈ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದಿದೆ.ಈ ಘಟನೆಗೆ ವಿಮಾನಯಾನ ಕಂಪೆನಿ ಶುಕ್ರವಾರ ಸಂಜೆ ಕ್ಷಮೆ ಕೋರಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News