ಸಲ್ಮಾನ್ ಖುರ್ಷಿದ್ ನಿವಾಸದಲ್ಲಿ ಕಳವು
Update: 2017-04-23 19:39 IST
ಫರೂಖಾಬಾದ್(ಉ.ಪ್ರ),ಎ.23: ಇಲ್ಲಿಯ ಕಯಾಮಗಂಜ್‌ನಲ್ಲಿರುವ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಅವರ ನಿವಾಸದಲ್ಲಿ ಕಳ್ಳತನ ನಡೆದಿರುವುದು ರವಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಮನೆಯ ಬೀಗಗಳನ್ನು ಮುರಿಯಲಾಗಿದ್ದು, ಸೊತ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಲಾಗಿದೆ. ಕಾವಲುಗಾರನ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಖುರ್ಷಿದ್ ಅವರಿಗೆ ಮಾಹಿತಿ ನೀಡಿದ್ದಾರೆ.
ಕಳ್ಳತನವಾಗಿರುವ ಸೊತ್ತುಗಳ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಾಗಿದೆ. ಕಾಂಗ್ರೆಸ್ ನಾಯಕ ಖುರ್ಷಿದ್ ಫರೂಖಾಬಾದ್‌ನ ಮಾಜಿ ಸಂಸದರಾಗಿದ್ದಾರೆ.