ಐಎಂಎಫ್ ಕೋಟ ವಿಳಂಬದಿಂದ ನಿರಾಶೆ : ಜೇಟ್ಲಿ

Update: 2017-04-23 14:34 GMT

ವಾಶಿಂಗ್ಟನ್, ಎ. 23: ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಕೋಟ ಸುಧಾರಣೆಗಳ ನಿಧಾನಗತಿಯ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ನಿರಾಶೆ ವ್ಯಕ್ತಪಡಿಸಿದ್ದಾರೆ ಹಾಗೂ ಇನ್ನಷ್ಟು ವಿಳಂಬದಿಂದ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ವಿಶ್ವಾಸಾರ್ಹತೆ ಕುಸಿಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಐಎಂಎಫ್‌ನ ಸಭೆಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಸಚಿವರು ಇಲ್ಲಿಗೆ ಆಗಮಿಸಿದ್ದಾರೆ.ಅದೇ ವೇಳೆ, ಜಾಗತಿಕ ಹಣಕಾಸು ಮತ್ತು ಆರ್ಥಿಕ ವ್ಯವಸ್ಥೆಗಳು ದುರುಪಯೋಗಗೊಳ್ಳುವುದನ್ನು ತಡೆಯಲು ಹೆಚ್ಚಿನ ನಿಗಾ ಇಡುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News