ಉತ್ತರ ಕೊರಿಯ: 3ನೆ ಅಮೆರಿಕ ಪ್ರಜೆಯ ಬಂಧನ
Update: 2017-04-23 20:35 IST
ಸಿಯೋಲ್, ಎ. 23: ಉತ್ತರ ಕೊರಿಯವು ಶುಕ್ರವಾರ ಇನ್ನೋರ್ವ ಅಮೆರಿಕ ಪ್ರಜೆಯನ್ನು ಬಂಧಿಸಿದ್ದು, ಆ ದೇಶದಲ್ಲಿ ಬಂಧಿಸಲ್ಪಟ್ಟವರ ಸಂಖ್ಯೆ ಮೂರಕ್ಕೇರಿದೆ ಎಂದು ದಕ್ಷಿಣ ಕೊರಿಯದ ಯೊನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತನ್ನ ಹರೆಯದ 50ರ ದಶಕದಲ್ಲಿರುವ ಕೊರಿಯನ್ ಅಮೆರಿಕನ್ ವ್ಯಕ್ತಿಯನ್ನು ಕಿಮ್ ಎಂಬ ಉಪನಾಮದಿಂದಷ್ಟೇ ಗುರುತಿಸಲಾಗಿದೆ. ಅವರು ಪರಿಹಾರ ಚಟುವಟಿಕೆಗಳ ಬಗ್ಗೆ ಮಾತುಕತೆ ನಡೆಸುವುದಕ್ಕಾಗಿ ಒಂದು ತಿಂಗಳಿನಿಂದ ಉತ್ತರ ಕೊರಿಯದಲ್ಲಿದ್ದರು ಎಂದು ಯೊನ್‌ಹಾಪ್ ರವಿವಾರ ತಿಳಿಸಿದರು.
ಅವರು ದೇಶದಿಂದ ಹೊರಹೋಗುವುದಕ್ಕಾಗಿ ಪ್ಯಾಂಗ್‌ಯಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ ಬಂಧಿಸಲಾಯಿತು.
ಅಮೆರಿಕದ ಹಿರಿಯ ಅಧಿಕಾರಿಗಳನ್ನು ಉತ್ತರ ಕೊರಿಯಕ್ಕೆ ಬರುವಂತೆ ಮಾಡುವುದಕ್ಕಾಗಿ ಅಮೆರಿಕದ ಪ್ರಜೆಗಳನ್ನು ಬಂಧಿಸುವ ಚಾಳಿಯನ್ನು ಉತ್ತರ ಕೊರಿಯ ಹೊಂದಿದೆ ಎನ್ನಲಾಗಿದೆ.