ಸಿರಿಯ ಶಿಬಿರದ ಮೇಲೆ ಇಸ್ರೇಲ್ ದಾಳಿ: 3 ಸಾವು

Update: 2017-04-23 16:21 GMT

ಡಮಾಸ್ಕಸ್ (ಸಿರಿಯ), ಎ. 23: ಗೋಲನ್ ಹೈಟ್ಸ್ ಸಮೀಪದಲ್ಲಿರುವ ಸಿರಿಯದ ಶಿಬಿರವೊಂದರ ಮೇಲೆ ಇಸ್ರೇಲ್ ರವಿವಾರ ನಡೆಸಿದ ದಾಳಿಯಲ್ಲಿ, ಮೂವರು ಸಿರಿಯ ಪರ ಹೋರಾಟಗಾರರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸಿರಿಯದ ಕುನೈಟ್ರ ಸಮೀಪದ ಅಲ್-ಫವ್ವರ್ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಹೋರಾಟಗಾರರು ಗಾಯಗೊಂಡಿದ್ದಾರೆ ಎಂದರು.ಗೋಲನ್ ಹೈಟ್ಸ್‌ನ ಉತ್ತರದ ಭಾಗದ ಮೇಲೆ ನಡೆದ ಮೋರ್ಟರ್ ದಾಳಿಗೆ ಪ್ರತೀಕಾರವಾಗಿ ಸಿರಿಯದ ಒಳಗಿನ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಶುಕ್ರವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News