ಸೌದಿ ದೊರೆ ಪುತ್ರ ಅಮೆರಿಕ ರಾಯಭಾರಿ

Update: 2017-04-23 16:41 GMT

ರಿಯಾದ್, ಎ. 23: ಸೌದಿ ಅರೇಬಿಯ ಶನಿವಾರ ದೊರೆ ಸಲ್ಮಾನ್ ಬಿನ್ ಅಬ್ದುಲಝೀಝ್‌ರ ಪುತ್ರ, ವಾಯುಪಡೆ ಪೈಲಟ್ ರಾಜಕುಮಾರ ಖಾಲಿದ್ ಬಿನ್ ಸಲ್ಮಾನ್ ಬಿನ್ ಅಬ್ದುಲಝೀಝ್‌ರನ್ನು ಅಮೆರಿಕದ ರಾಯಭಾರಿಯನ್ನಾಗಿ ನೇಮಿಸಿದೆ.

ಈಗಿನ ಅಮೆರಿಕ ರಾಯಭಾರಿ ರಾಜಕುಮಾರ ಅಬ್ದುಲ್ಲಾ ಬಿನ್ ಫೈಸಲ್ ಬಿನ್ ತುರ್ಕಿ ಅವರನ್ನು ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News