ಆಯ್ಕೆ ಸಮಿತಿಗೆ ತಲೆನೋವಾಗಿ ಪರಿಣಮಿಸಿರುವ ಚಾಂಪಿಯನ್ಸ್ ಟ್ರೋಫಿ ತಂಡದ ಆಯ್ಕೆ

Update: 2017-04-23 17:23 GMT

ಹೊಸದಿಲ್ಲಿ, ಎ.23: ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ಗೆ ಐದಿನೈದು ಮಂದಿ ಆಟಗಾರ ರ ಪಟ್ಟಿಯನ್ನು ಎಪ್ರಿಲ್ 25ರ ಮೊದಲು ಸಲ್ಲಿಸುವಂತೆ ಐಸಿಸಿ ಅಂತಿಮ ಗಡುವು ವಿಧಿಸಿದ್ದು, ಈ ಕಾರಣದಿಂದಾಗಿ ಇನ್ನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾದ ಆಯ್ಕೆ ನಡೆಯಲಿದೆ.

ತಂಡದ ಆಯ್ಕೆಗೆ ಇನ್ನೂ ದಿನ ನಿಗದಿಯಾಗದಿದ್ದರೂ, ತಂಡದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವ ವಿಚಾರದಲ್ಲಿ ಆಯ್ಕೆ ಸಮಿತಿಗೆ ಸವಾಲು ಎದುರಾಗಿದೆ. ಅದರಲ್ಲೂ ಮುಖ್ಯವಾಗಿ ವೇಗದ ಬೌಲಿಂಗ್ ವಿಭಾಗಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಸವಾಲು ಎದುರಾಗಿದೆ. ನಾಲ್ಕನೆ ಬೌಲರ್ ಸ್ಥಾನಕ್ಕೆ ಮುಹಮ್ಮದ್ ಶಮಿ ಮತ್ತು ಆಶಿಷ್ ನೆಹ್ರಾ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಆದಾಯ ಹಂಚಿಕೆ ಮತ್ತು ಆಡಳಿತದ ಸಂಬಂಧಿಸಿದ ಸಮಸ್ಯೆಗಳನ್ನು ಐಸಿಸಿ ಇತ್ಯರ್ಥಗೊಳಿಸುವಂತೆ ಬಿಸಿಸಿಐನ ಕೆಲವು ಸದಸ್ಯರು ಪಟ್ಟು ಹಿಡಿದಿದ್ದಾರೆ. ಈ ಕಾರಣದಿಂದಾಗಿ ಆಯ್ಕೆ ಸಮಿತಿಯ ಸಭೆ ನಡೆಯುವುದು ವಿಳಂಬವಾಗಿದೆ.

ಸ್ಪಿನ್ ವಿಭಾಗದಲ್ಲಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಗೆ ಅವರಿಗೆ ಸ್ಥಾನ ಪಡೆಯಲು ಯಾವುದೇ ಸಮಸ್ಯೆ ಇಲ್ಲ. ಈ ಕಾರಣದಿಂದಾಗಿ ಅವರು ಮುಂದಿನ ವಾರ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ಗೆ ಅಭ್ಯಾಸ ಆರಂಭಿಸಲಿದ್ದಾರೆ.

ಡೆತ್-ಓವರ್ಸ್‌ ಸ್ಪೆಶಲಿಸ್ಟ್ ಜಸ್‌ಪ್ರೀತ್ ಬುಮ್ರಾ, ಸ್ವಿಂಗ್ ಬೌಲರ್ ಭುವನೇಶ್ವರ ಕುಮಾರ್ ಮತ್ತು ಸ್ವೀಡ್ ಮರ್ಚಂಟ್ ಉಮೇಶ್ ಯಾದವ್ ಅವರು ಹದಿನೈದು ಮಂದಿ ಆಟಗಾರರ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ ಎನ್ನಲಾಗಿದೆ.

ವೇಗಿ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಸ್ಥಾನ ತುಂಬಲಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಸ್ಥಾನ ಪಡೆಯಲು ಶಮಿ ಮತ್ತು ನೆಹ್ರಾ ನಡುವೆ ಪೈಪೋಟಿ ಏರ್ಪಟ್ಟಿದೆ.

ಶಮಿ ಟೆಸ್ಟ್ ಕ್ರಿಕೆಟ್‌ಗೆ ಸರಿಯಾದ ಬೌಲರ್. ಅವರು 2015ರಲ್ಲಿ ಸಿಡ್ನಿಯಲ್ಲಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕೊನೆಯ ಬಾರಿ ಆಡಿದ್ದರು. ಆ ಬಳಿಕ ಅವರು ಏಕದಿನ ಕ್ರಿಕೆಟ್ ಆಡಿಲ್ಲ. 37ರ ಹರೆಯದ ನೆಹ್ರಾ 2011ರ ವಿಶ್ವಕಪ್ ಸೆಮಿಫೈನಲ್ ಟೀಮ್ ಇಂಡಿಯಾಕ್ಕೆ ವಾಪಸಾಗಿದ್ದರು. ಬಳಿಕ ತಂಡದಿಂದ ಹೊರಗುಳಿದು 2016ರಲ್ಲಿ ಮತ್ತೊವೆ್ಮು ತಂಡದಲ್ಲಿ ಸ್ಥಾನ ಪಡೆದಿದ್ದರು.

 ನೆಹ್ರಾ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲು ನಾಯಕ ವಿರಾಟ್ ಕೊಹ್ಲಿ ಆಸಕ್ತಿ ವಹಿಸಿದ್ದಾರೆ. ಅವರು ತಂಡದಲ್ಲಿದ್ದರೆ ಅವರ ಅನುಭವ ಯುವ ಆಟಗಾರರ ನೆರವಿಗೆ ಬರಬಹುದೆನ್ನುವುದು ಕೊಹ್ಲಿ ಲೆಕ್ಕಾಚಾರವಾಗಿದೆ.

ನೆಹ್ರಾ ವಿಜಯ್ ಹಝಾರೆ ಟ್ರೋಫಿ ಟೂರ್ನಮೆಂಟ್‌ನಲ್ಲಿ ದಿಲ್ಲಿ ಪರ ಆಡಿದ್ದರು. ಅವರು ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ತಂಡದ ಆಟಗಾರ ಗಾಯದ ಕಾರಣದಿಂದಾಗಿ ಅವರು ಹತ್ತನೆ ಆವೃತ್ತಿಯಲ್ಲಿ ಆಡಿಲ್ಲ. ಮುಹಮ್ಮದ್ ಶಮಿ ಡೇರ್ ಡೆವಿಲ್ಸ್ ತಂಡದ ಆಟಗಾರ. ಅವರ ಫಾರ್ಮ್‌ನ್ನು ಆಯ್ಕೆ ಸಮಿತಿ ಗಮನಿಸುತ್ತಿದೆ.ಇವರ ಸ್ಪರ್ಧೆಯ ನಡುವೆ ಯುವ ಆಟಗಾರ ಬಾಸಿಲ್ ಥಾಂಪಿ ಅವಕಾಶಪಡೆಯುವುದನ್ನು ಕಡೆಗಣಿಸುವಂತಿಲ್ಲ. ಅವರು ಈಗಾಗಲೇ ತನ್ನ ಅತ್ಯುತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

ಸುನಿಲ್ ಗವಾಸ್ಕರ್ ಮತ್ತು ಡ್ವೇಯ್ನಾ ಬ್ರಾವೊ ಅವರಂತಹ ಲೆಜೆಂಡ್‌ಗಳು ಕೇರಳದ ಬೌಲ ರ್ ಥಾಂಪಿ ಬೌಲಿಂಗ್‌ನ್ನು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News