ರಸ್ತೆ ಅಪಘಾತ: ಭಾರತದಲ್ಲಿ ದಿನಕ್ಕೆ ಬಲಿಯಾಗುವವರು ಎಷ್ಟು ಗೊತ್ತೇ?

Update: 2017-04-24 03:39 GMT

ಹೊಸದಿಲ್ಲಿ, ಎ.24: ದೇಶದಲ್ಲಿ 2016ರಲ್ಲಿ ಪ್ರತೀದಿನ 410 ಮಂದಿ ರಸ್ತೆ ಅಪಘಾತಗಳಿಗೆ ಬಲಿಯಾಗಿದ್ದಾರೆ. 2015ರಲ್ಲಿ ಪ್ರತೀದಿನ ಅಪಘಾತಕ್ಕೆ ಬಲಿಯಾದವರ ಸಂಖ್ಯೆ ಸರಾಸರಿ 400 ಆಗಿತ್ತು.

ಆದಾಗ್ಯೂ ಸಾಯುವ ಪ್ರಮಾಣ ಹಿಂದಿನ ವರ್ಷಕ್ಕಿಂತ 2016ರಲ್ಲಿ ಕಡಿಮೆಯಾಗಿದೆ. 2106ರಲ್ಲಿ ದೇಶಾದ್ಯಂತ ರಸ್ತೆ ಅಪಘಾತಗಳಿಗೆ ಬಲಿಯಾದವರ ಸಂಖ್ಯೆ 1.5 ಲಕ್ಷ ಆಗಿದ್ದು, 2014ರಲ್ಲಿ 1.46 ಲಕ್ಷ ಮಂದಿ ಅಪಘಾತಗಳಿಗೆ ಬಲಿಯಾಗಿದ್ದರು.

ಅಪಘಾತಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಭಾರತದಲ್ಲಿ ಅತ್ಯಧಿಕ. ಮಿಝೋರಾಂ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ, ಡಮನ್ ಮತ್ತು ಡಿಯು, ದಾದ್ರ ಮತ್ತು ನಗರ ಹವೇಲಿ ಹೊರತುಪಡಿಸಿದರೆ ಉಳಿದೆಲ್ಲ ರಾಜ್ಯಗಳು ಅಪಘಾತ ಅಂಕಿ ಸಂಖ್ಯೆಗಳನ್ನು ಕೇಂದ್ರ ಸರ್ಕಾರ ಹಾಗೂ ರಸ್ತೆ ಸುರಕ್ಷತೆ ಕುರಿತ ಸುಪ್ರೀಂಕೋರ್ಟ್ ಸಮಿತಿ ಜತೆ ಹಂಚಿಕೊಂಡಿವೆ.

ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಶೇಕಡ 50ಷ್ಟು ಕಡಿಮೆ ಮಾಡಲು ಕಾರ್ಯಯೋಜನೆ ಹಮ್ಮಿಕೊಂಡಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ದಿಲ್ಲಿ ಸೇರಿದಂತೆ ಒಂಬತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಪಘಾತ ಸಂತ್ರಸ್ತರ ಸಂಖ್ಯೆ ಇಳಿಮುಖವಾಗಿದೆ. ಇಂಥ ಇಳಿಕೆಯಲ್ಲಿ ಬಿಹಾರಕ್ಕೆ ಅಗ್ರಸ್ಥಾನ.

ಆದರೆ ಉತ್ತರಪ್ರದೇಶ, ತಮಿಳುನಾಡು, ಮಧ್ಯಪ್ರದೇಶ, ಆಂಧ್ರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಈ ಸಂಖ್ಯೆ ಹಿಂದಿನ ವರ್ಷಕ್ಕಿಂತ ಅಧಿಕವಾಗಿದೆ. 2016ರಲ್ಲಿ ಇದರಿಂದಾಗಿ 1970ರ ಬಳಿಕ ಅತ್ಯಧಿಕ ಸಂಖ್ಯೆಯ ಮಂದಿ ಅಪಘಾತಗಳಲ್ಲಿ ಮೃತಪಟ್ಟಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News