ಶ್ರೀನಗರ: ವಿದ್ಯಾರ್ಥಿಗಳು, ಭದ್ರತಾಪಡೆಗಳ ನಡುವೆ ಘರ್ಷಣೆ

Update: 2017-04-24 14:59 GMT

  ಶ್ರೀನಗರ, ಎ.24: ಇಲ್ಲಿನ ಕಾಲೇಜೊಂದರಲ್ಲಿ ಪ್ರತಿಭಟನನಿರತ ವಿದ್ಯಾರ್ಥಿಗಳ ಹಾಗೂ ಭದ್ರತಾಪಡೆಗಳ ನಡುವೆ ಘರ್ಷಣೆ ನಡೆದಿರುವ ಬಗ್ಗೆ ವರದಿಯಾಗಿದೆ. ಶ್ರೀನಗರದ ವೌಲಾನಾ ರಸ್ತೆಯಲ್ಲಿರುವ ಎಸ್ಪಿ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳ ಗುಂಪೊಂದು ಪ್ರತಿಭಟನಾ ಮೆರವಣಿಗೆಯನ್ನು ನಡೆಸಲು ಯತ್ನಿಸಿದಾಗ ಭದ್ರತಾಪಡೆಗಳು ತಡೆದ ಬಳಿಕ ಹಿಂಸಚಾರ ಸ್ಪೋಟಿಸಿತೆಂದು ಮೂಲಗಳು ತಿಳಿಸಿವೆ. ಕಳೆದ ವಾರ ಕಾಶ್ಮೀರದ ಲಾಲ್‌ಚೌಕದಲ್ಲಿ ವಿದ್ಯಾರ್ಥಿಗಳನ್ನು ಚದುರಿಸಲು ಭದ್ರತಾಪಡೆಗಳು ಅಶ್ರುವಾಯು ಸೆಲ್‌ಗಳನ್ನು ಬಳಸಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಪುಲ್ವಾಮಾದಲ್ಲಿ ಎಪ್ರಿಲ್ 15ರಂದು ವಿದ್ಯಾರ್ಥಿಗಳ ಮೇಲೆ ಭದ್ರತಾಪಡೆಗಳು ದೌರ್ಜನ್ಯವೆಸಗಿವೆಯೆಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮುಂಜಾಗರೂಕತಾ ಕ್ರಮವಾಗಿ ಕಳೆದ ಐದು ದಿನಗಳಿಂದ ಶಾಲಾಕಾಲೇಜುಗಳನ್ನು ಮುಚ್ಚುಗಡೆಗೊಳಿಸಲಾಗಿತ್ತು. ಇಂದು ಶಾಲಾಕಾಲೇಜ್ ಪುನಾರಂಭಗೊಂಡ ಬೆನ್ನಲ್ಲೇ ಮತ್ತೆ ಗಲಭೆ ಭುಗಿಲೆದ್ದಿದೆ.

 ಈ ಮದ್ಯೆ ರಾಜಸ್ಥಾನದಲ್ಲಿ ಖಾಸಗಿ ವಿವಿಯೊಂದರಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಸ್ಥಳೀಯರ ಗುಂಪೊಂದು ಹಲ್ಲೆ ನಡೆಸಿ, ಅವರನ್ನು ಭಯೋತ್ಪಾದಕರು ಎಂದು ನಿಂದಿಸಿದ ಘಟನೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News