ಶರೀಫ್ ವಿರುದ್ಧದ ತನಿಖೆಯಲ್ಲಿ ಪಾಲ್ಗೊಳ್ಳುವೆ : ಪಾಕ್ ಸೇನೆ

Update: 2017-04-24 14:54 GMT

ಇಸ್ಲಾಮಾಬಾದ್, ಎ. 24: ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಮತ್ತು ಅವರ ಕುಟುಂಬವನ್ನು ಒಳಗೊಂಡ ‘ಪನಾಮಗೇಟ್’ ಹಗರಣದ ತನಿಖೆಯಲ್ಲಿ ‘ಕಾನೂನುಬದ್ಧ ಹಾಗೂ ಪಾರದರ್ಶಕ ರೀತಿಯಲ್ಲಿ’ ತೊಡಗಿಸಿಕೊಳ್ಳುವುದಾಗಿ ದೇಶದ ಸೇನೆ ಸೋಮವಾರ ಹೇಳಿದೆ.

ಪ್ರಧಾನಿ ಮತ್ತು ಅವರ ಕುಟುಂಬ ಸದಸ್ಯರು ಭ್ರಷ್ಟಾಚಾರದಿಂದ ಸಂಪಾದಿಸಿದ ಹಣವನ್ನು ವಿದೇಶಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂಬುದಾಗಿ ಪನಾಮ ದಾಖಲೆಗಳು ಬಹಿರಂಗಪಡಿಸಿರುವುದನ್ನು ಸ್ಮರಿಸಬಹುದಾಗಿದೆ.

ಶರೀಫ್ ಕುಟುಂಬಿಕರ ವಿರುದ್ಧದ ತನಿಖೆಗೆ ಐಎಸ್‌ಐ ಮತ್ತು ಸೇನಾ ಗುಪ್ತಚರ ಸಂಸ್ಥೆ ಸೇರಿದಂತೆ ಪ್ರಭಾವಶಾಲಿ ಗುಪ್ತಚರ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ತನಿಖಾ ತಂಡವೊಂದನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ರಚಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News