ಅಫ್ಘಾನ್: ಅಮೆರಿಕ ಸೇನಾ ನೆಲೆಯ ಮೇಲೆ ದಾಳಿ

Update: 2017-04-24 14:57 GMT

ಖೋಸ್ತ್ (ಅಫ್ಘಾನಿಸ್ತಾನ), ಎ. 24: ಅಫ್ಘಾನಿಸ್ತಾನದ ಪೂರ್ವದ ರಾಜ್ಯ ಖೋಸ್ತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯೊಂದರ ಮೇಲೆ ಶಂಕಿತ ತಾಲಿಬಾನ್ ಉಗ್ರರು ಸೋಮವಾರ ದಾಳಿ ನಡೆಸಿದ್ದಾರೆ.ಆದರೆ, ದಾಳಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಅಧಿಕಾರಿಗಳು ನೀಡಲಿಲ್ಲ.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ರಾಜಧಾನಿ ಕಾಬೂಲ್‌ಗೆ ಭೇಟಿ ನೀಡಿದ ದಿನದಂದೇ ಈ ದಾಳಿ ನಡೆದಿರುವುದು ಗಮನಾರ್ಹವಾಗಿದೆ.
ಅಮೆರಿಕದ ಸೈನಿಕರು ಮತ್ತು ಖಾಸಗಿ ಸೇನಾ ಗುತ್ತಿಗೆದಾರರು ನಿರ್ವಹಿಸುವ ಗುಪ್ತ ನೆಲೆ ‘ಕ್ಯಾಂಪ್ ಚಾಪ್‌ಮನ್’ನ ದ್ವಾರದಲ್ಲಿ ದಾಳಿಕೋರರು ಕಾರ್‌ಬಾಂಬೊಂದನ್ನು ಸ್ಫೋಟಿಸಿದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News