ಹಜ್: ಯುಎಇಯಲ್ಲಿರುವ ವಲಸಿಗರಿಗೆ "ಬ್ಯಾಡ್ ನ್ಯೂಸ್"

Update: 2017-04-25 07:04 GMT

ದುಬೈ, ಎ.25: ಯುಎಇಯಲ್ಲಿರುವ ವಲಸಿಗರಿಗೊಂದು ಕೆಟ್ಟ ಸುದ್ದಿಯಿದೆ. ಈ ವರ್ಷ ಹಾಗೂ ಮುಂದಿನ ಹಜ್ ಋತುವಿನಲ್ಲಿ ವಲಸಿಗರಿಗೆ ಹಜ್ ಯಾತ್ರೆಗೆ ಅನುಮತಿ ನೀಡದಿರಲು ಅಲ್ಲಿನ ಆಡಳಿತ ನಿರ್ಧರಿಸಿದೆ. ಇಸ್ಲಾಮಿಕ್ ಅಫೇರ್ಸ್‌ ಆ್ಯಂಡ್ ಎಂಡೋಮೆಂಟ್ಸ್ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ ನೆರೆಯ ಸೌದಿ ಅರೇಬಿಯಾದ ಹಜ್ ಅಧಿಕಾರಿಗಳಿಂದ ನಿರ್ದೇಶನ ದೊರೆತ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ವಿಚಾರದಲ್ಲಿ ತಮಗೆ ಸಂಬಂಧಿತ ಇಲಾಖೆಯಿಂದ ಇನ್ನೂ ದೃಢೀಕರಣ ದೊರೆತಿಲ್ಲ ಹಾಗೂ ಸೂಕ್ತ ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದು ಶಾರ್ಜಾ ಮೂಲದ ಉಮ್ರಾ ಕಚೇರಿ ಅಲ್ ನಫ್ರಾದ ಉದ್ಯೋಗಿಯೊಬ್ಬರು ಹೇಳಿದ್ದಾರೆ.

2016ರಲ್ಲಿ ಒಟ್ಟು 1,862, 909 ಯಾತ್ರಾರ್ಥಿಗಳು ಹಜ್ ಯಾತ್ರೆ ಕೈಗೊಂಡಿದ್ದರೆ, ಅವರಲ್ಲಿ 1,325,372 ಮಂದಿ ವಿದೇಶಗಳಿಂದ ಬಂದವರು. ದೇಶೀಯ ಯಾತ್ರಾರ್ಥಿಗಳ ಸಂಖ್ಯೆ 537,537 ಆಗಿತ್ತು. ಇದು 10 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ.

ಈ ವರ್ಷದ ಆರಂಭದಲ್ಲಿ ಪ್ರಾಧಿಕಾರವು ದೇಶಾದ್ಯಂತ 81 ಕೇಂದ್ರಗಳಲ್ಲಿ ಹಜ್ ನೋಂದಣಿಗಾಗಿ ಅನುಮತಿಸಿತ್ತು. ಮೊದಲ ದಿನದಂದೇ 2,000 ಯಾತ್ರಾರ್ಥಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಿದ್ದರು. ಈ ಯಾತ್ರೆಯ ಪ್ಯಾಕೇಜುಗಳು ಯಾತ್ರಾರ್ಥಿಗಳು ಆಯ್ದುಕೊಳ್ಳುವ ಹೊಟೇಲುಗಳ ಆಧಾರದಲ್ಲಿ 14,500 ದಿರ್ಹಮ್ ನಿಂದ ಆರಂಭಗೊಂಡು 30,000 ದಿರ್ಹಮ್ ತನಕವಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News