ಪಾಕ್ ನಲ್ಲಿ ಬಾಂಬ್ ಸ್ಫೋಟ : 6 ಮಕ್ಕಳು ಸೇರಿದಂತೆ 10ಸಾವು

Update: 2017-04-25 07:17 GMT

 ಪೇಶಾವರ, ಎ.25: ಪಾಕಿಸ್ತಾನದ ಗುದಾರ್ ನಲ್ಲಿ ಪ್ರಯಾಣಿಕರ ವ್ಯಾನ್ ಪಕ್ಕದಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ ಆರು ಮಕ್ಕಳು ಸೇರಿದಂತೆ ಹತ್ತು ಮಂದಿ ಮೃತಪಟ್ಟು , ಹದಿಮೂರು ಜನರು ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಕುರ‍್ರಾಮ್‌ ನ ಬುಡಕಟ್ಟು ಜನಾಂಗ ನೆಲೆಸಿರುವ ಪ್ರದೇಶದಲ್ಲಿ ಕಳೆದ ತಿಂಗಳು ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 28ಮಂದಿ ಮೃತಪಟ್ಟಿದ್ದರು. ನೂರಕ್ಕೂ ಅಧಿಕ ಜನರು ಗಾಯಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News