ಗಗನಯಾನಿ ಪೆಗ್ಗಿ ಹೊಸ ದಾಖಲೆ !

Update: 2017-04-25 10:57 GMT

ವಾಷಿಂಗ್ಟನ್, ಎ. 25: ಅಮೆರಿಕದ ಗಗನ ಯಾನಿ ಪೆಗ್ಗಿವಿಟ್ಸನ್ ಇನ್ನೊಂದು ದಾಖಲೆ ಬರೆದಿದ್ದಾರೆ. ಬಾಹ್ಯಾಕಾಶ ನೆಲೆಯಲ್ಲಿ ಅತೀ ಹೆಚ್ಚು ಸಮಯ ಕಳೆದ ಸಾಧನೆ 57ವರ್ಷ ವಯಸ್ಸಿನ ಮಹಿಳೆ ಪೆಗ್ಗಿ ವಿಟ್ಸ್‌ನ್ ತಮ್ಮದಾಗಿಸಿಕೊಂಡಿದ್ದಾರೆ.

ಈ ಮೊದಲು ಜೆಫ್ ವಿಲ್ಯಮ್ಸನ್ 534 ದಿವಸ ಬಾಹ್ಯಾಕಾಶ ನೆಲೆಯಲ್ಲಿ ಇದ್ದುದು ದಾಖಲೆಯಾಗಿತ್ತು. ಪೆಗ್ಗಿಯೊಂದಿಗೆ ಗಗನ ಯಾತ್ರೆಗೆ ಹೋದವರು ಮರಳಿ ಬಂದಿದ್ದರು.

ಆದರೆ ಪೆಗ್ಗಿ ಕೆಲವು ಪ್ರಯೋಗಕ್ಕಾಗಿ ಐದು ತಿಂಗಳು ಅಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ. ಗುರುತ್ವಾಕರ್ಷಣೆ ಇಲ್ಲದ ಜಾಗದಲ್ಲಿ ಅತ್ಯಂತ ಹೆಚ್ಚು ಸಮಯ ನಡೆದಿದ್ದರ ದಾಖಲೆ ಪೆಗ್ಗಿಯ ಹೆಸರಿನಲ್ಲಿ ಈಗಾಗಲೇ ಇದೆ. ಜೊತೆಗೆ ಬಾಹ್ಯಾಕಾಶ ನೆಲೆಯ ಮೊದಲ ಮಹಿಳಾ ಕಮಾಂಡರ್ ಕೂಡಾ ಇವರೇ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News