1,300 ಕಿ.ಮೀ. ಕಾರು ಚಲಾಯಿಸಿದ 12ವರ್ಷದ ಬಾಲಕನ ಸೆರೆ !

Update: 2017-04-25 11:02 GMT
ಸಾಂದರ್ಭಿಕ ಚಿತ್ರ

ಕ್ಯಾನ್‌ಬರ,ಎ. 25: ಆಸ್ಟ್ರೇಲಿಯದಲ್ಲಿ 1,300 ಕಿಲೊಮೀಟರ್ ಕಾರು ಚಲಾಯಿಸಿದ 12ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಕೆಂಡಲ್‌ನ ಮನೆಯಿಂದ ಶುಕ್ರವಾರ ಬೆಳಗ್ಗೆ ಕಾರು ತೆಗೆದುಕೊಂಡು ಹೋದ ಬಾಲಕ ಬ್ರೋಕನ್ ಹಿಲ್ ಪ್ರದೇಶದಲ್ಲಿ ತನಿಖಾಧಿಕಾರಿಗಳಿಗೆ ಸೆರೆಸಿಕ್ಕಿದ್ದಾನೆ. ಕಾರಿನ ಬಂಪರ್ ನೆಲಕ್ಕೆ ಬಡಿದಿದ್ದರ ಕಲೆ ಇದೆ. ಕಾರುಓಡಿಸಿದಾಗ ಅಪಘಾತ ಆಗಿದೆ ಎನ್ನುವ ಸೂಚನೆಯೂಇದೆ ಎಂದು ಡಿಡೆಕ್ಟಿವ್ ಇನ್ಸ್‌ಪೆಕ್ಟರ್ ಕಿಂ ಫೆಹೋನ್ ತಿಳಿಸಿದ್ದಾರೆ.

ಬಾಲಕ ಕಾರಿನೊಂದಿಗೆ ಹೊರಹೋದಾಗ ಅವನ ಮನೆಯವರು ಪೊಲೀಸರಿಗೆ ನಾಪತ್ತೆ ಕೇಸು ಕೊಟ್ಟಿದ್ದರು. ನ್ಯೂಸೌತ್‌ವೇಲ್ಸ್‌ನುದ್ದಕ್ಕೂ 1300 ಕಿಲೊಮೀಟರ್ ಕಾರು ಚಲಾಯಿಸಿ ಪರ್ತ್‌ಗೆ ದಾಟುವ ವೇಳೆ ಬಾಲಕ ಸೆರೆಸಿಕ್ಕಿದ್ದಾನೆ.

ಬಾಲಕ ಕಾರು ತೆಗೆದು ಹೊರಟದ್ದೇಕೆ ಎಂದು ಪೊಲೀಸರುತನಿಖೆ ನಡೆಸುತ್ತಿದ್ದಾರೆ. ಅವನನ್ನು ಈಗ ಬಿಡುಗಡೆಮಾಡಲಾಗಿದೆ.ಪೆಟ್ರೋಲ್ ಹಾಕಿಸಿ ಹಣ ಕೊಟ್ಟಿಲ್ಲ, ಲೈಸನ್ಸ್ ಇಲ್ಲದೆ ಕಾರು ಓಡಿಸಿದ್ದು ಮುಂತಾದ ಆರೋಪವನ್ನು ಹೊರಿಸಿಅವನ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News