ಜಾರ್ಖಂಡ್‌ನ ದೇವಘರದಲ್ಲಿ 14 ಭ್ರೂಣಗಳು ಪತ್ತೆ

Update: 2017-04-25 13:17 GMT

ರಾಂಚಿ,ಎ.25: ದೇವಘರ ಜಿಲ್ಲೆಯಲ್ಲಿ ಕನಿಷ್ಠ 14 ಭ್ರೂಣಗಳು ಪತ್ತೆಯಾಗಿದ್ದು, ಈ ಪೈಕಿ ಹೆಚ್ಚಿನವು ಹೆಣ್ಣು ಭ್ರೂಣಗಳಾಗಿವೆ.

ಸೋಮವಾರ ದುಮರ್ಥಾರ್ ಗ್ರಾಮದ ರಸ್ತೆಯಂಚಿನ ಪೊದೆಯಲ್ಲಿ 12 ಭ್ರೂಣಗಳಿದ್ದ ಚೀಲವೊಂದು ಪತ್ತೆಯಾಗಿದ್ದು, ರವಿವಾರವೂ ಇದೇ ಸ್ಥಳದಲ್ಲಿ ಎರಡು ಭ್ರೂಣಗಳು ಸಿಕ್ಕಿದ್ದವು ಎಂದು ಪೊಲೀಸರು ಮಂಗಳವಾರ ತಿಳಿಸಿದರು.

ಹೆಚ್ಚಿನವು ಹೆಣ್ಣುಭ್ರೂಣಗಳಾಗಿರುವುದರಿಂದ ಇದು ಹೆಣ್ಣುಭ್ರೂಣ ಹತ್ಯೆ ಪ್ರಕರಣವಾಗಿರಬಹುದು ಅಥವಾ ಎರಡು ಗಂಡುಭ್ರೂಣಗಳೂ ಪತ್ತೆಯಾಗಿರುವುದರಿಂದ ಅಕ್ರಮ ಗರ್ಭಪಾತ ಪ್ರಕರಣವೂ ಆಗಿರಬಹುದು. ಇದರಲ್ಲಿ ನರ್ಸಿಂಗ್ ಹೋಮ್‌ಗಳ ಪಾತ್ರವನ್ನು ತಳ್ಳಿಹಾಕುವಂತಿಲ್ಲ ಎಂದು ಪೊಲೀಸ್ ಅಧಿಕಾರಿಯೋರ್ವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News