ಕೆಟ್ಟ ಸಾಲ ವಸೂಲಾತಿಗೆ ಗರಿಷ್ಠ ಆದ್ಯತೆ : ಜೇಟ್ಲಿ

Update: 2017-04-25 13:56 GMT

ನ್ಯೂಯಾರ್ಕ್, ಎ. 25: ಕೆಟ್ಟ ಸಾಲಗಳ ವಿಷಯವನ್ನು ನಿಭಾಯಿಸುವುದಕ್ಕೆ ಸರಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಅದೇ ವೇಳೆ, ವಸೂಲಾಗದ ಸಾಲಗಳು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ‘ಪ್ರತಿಕೂಲ ಪರಿಣಾಮ’ ಬೀರುತ್ತವೆ ಎನ್ನುವುದನ್ನು ಅವರು ಒಪ್ಪಿಕೊಂಡರು.

ಇಲ್ಲಿ ‘ವಿದೇಶಿ ಸಂಬಂಧಗಳ ಮಂಡಳಿ’ಯಲ್ಲಿ ಸೋಮವಾರ ಮಾತನಾಡಿದ ಜೇಟ್ಲಿ, ವಸೂಲಾಗದ ಸಾಲ ಸಮಸ್ಯೆಗೆ ಪರಿಹಾರವೊಂದನ್ನು ಕಂಡುಕೊಳ್ಳುವುದು ‘ಅತ್ಯಂತ ದೊಡ್ಡ ಸವಾಲಾಗಿದೆ’ ಹಾಗೂ ಈ ಹಂತದಲ್ಲಿ ಸರಕಾರದ ಪ್ರಥಮ ಆದ್ಯತೆಯೂ ಆಗಿದೆ ಎಂದರು.ಸಾಲ ವಸೂಲಾತಿ ಸಮಸ್ಯೆ 20ರಿಂದ 30 ದೊಡ್ಡ ಖಾತೆಗಳಲ್ಲಿ ಇದೆ ಎಂದು ಅವರು ನುಡಿದರು.

‘‘ಅದು ಲಕ್ಷಾಂತರ ಖಾತೆಗಳ ಸಮಸ್ಯೆಯಲ್ಲ. 20ರಿಂದ 30 ಖಾತೆಗಳನ್ನು ನಿಭಾಯಿಸುವುದು ಭಾರತದಂಥ ಬೃಹತ್ ಆರ್ಥಿಕತೆಗೆ ಅಸಾಧ್ಯವೇನಲ್ಲ. ಹಾಗಾಗಿ, ಅದೊಂದು ಪರಿಹರಿಸಲಾಗದ ಸಮಸ್ಯೆಯೇನಲ್ಲ. ಆದರೆ, ಅದು ತುಂಬಾ ಸಮಯದಿಂದ ನಡೆದುಕೊಂಡು ಬಂದಿದೆ. ಹಾಗಾಗಿ, ಅದು ಖಂಡಿತವಾಗಿಯೂ ನಮ್ಮ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News