ಭೂಮಿಯಾಳದ ಅಂತರ್ಜಲಕ್ಕೂ ಮಾಲಿನ್ಯ ಭೀತಿ

Update: 2017-04-25 15:37 GMT

ವಿಯೆನ್ನ, ಎ. 25: ಲಕ್ಷಾಂತರ ವರ್ಷಗಳಿಂದ ಭೂಮಿಯಾಳದಲ್ಲಿ ಭದ್ರವಾಗಿರುವ ಹಾಗೂ ಮಾಲಿನ್ಯಕ್ಕೆ ಅತೀತ ಎಂಬುದಾಗಿ ಹಿಂದಿನಿಂದಲೂ ನಂಬಿಕೊಂಡು ಬರಲಾಗಿದ್ದ ಪರಿಶುದ್ಧ ಅಂತರ್ಜಲ ಮಾನವನ ಚಟುವಟಿಕೆಗಳಿಂದ ಕಲುಷಿತಗೊಳ್ಳುವ ಭೀತಿಯನ್ನು ಎದುರಿಸುತ್ತಿದೆ.

ಭೂಮಿಯ ಮೇಲ್ಪದರದಿಂದ 250 ಮೀಟರ್‌ಗೂ ಹೆಚ್ಚಿನ ಆಳದಲ್ಲಿರುವ ಹಾಗೂ ಭೂಮಿಯಡಿಯ ಅಂತರ್ಜಲ ಎಂಬುದಾಗಿ ಕರೆಯಲಾಗುತ್ತಿರುವ ನೀರಿನಲ್ಲಿಯೂ ಈಗಿನ ಮಳೆ ನೀರಿನ ಅಂಶಗಳು ಪತ್ತೆಯಾಗಿವೆ ಎಂದು ಕ್ಯಾಲ್ಗೇರಿ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನವೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News