ಅತ್ಯಾಧುನಿಕ ವೈಜ್ಞಾನಿಕ ವಿಚಾರಣಾ ಘಟಕ ಉದ್ಘಾಟನೆ

Update: 2017-04-25 18:42 GMT

ಕಾಸರಗೋಡು , ಎ.25: ಕ್ರಿಮಿನಲ್ ಪ್ರಕರಣಗಳ ಆರೋಪಿಗಳನ್ನು ವೈಜ್ಞಾನಿಕ ರೀತಿಯಲ್ಲಿ ತನಿಖೆಗೊಳಪಡಿಸುವ ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ವೈಜ್ಞಾನಿಕ ವಿಚಾರಣಾ ಘಟಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆರಂಭಗೊಂಡಿತು.

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ಸಿಮೋನ್ ಚಾಲನೆ ನೀಡಿದರು.

ಈ ಸಂದರ್ಭ ಡಿವೈಎಸ್ಪಿ ಹರಿಶ್ಚಂದ್ರ ನಾಯ್ಕ್, ಎಂ. ವಿ. ಸುಕುಮಾರನ್, ಹಸೈನಾರ್, ಟಿ.ಪಿ. ಪ್ರೇಮರಾಜನ್ , ಸಿನಿ ಡೆನ್ನಿಸ್ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯ ಸರಕಾರದ ಯೋಜನಾ ನಿಧಿಯ ಆರ್ಥಿಕ ನೆರವಿನೊಂದಿಗೆ ಈ ಘಟಕ ಸ್ಥಾಪಿಸಲಾಗಿದೆ. ಕೊಚ್ಚಿ ವಲಯದ ಐ.ಜಿ. ವಿಜಯ್ ಘಟಕಕ್ಕೆ ರೂಪು ನೀಡಿದ್ದಾರೆ. ಇದು ರಾಜ್ಯದಲ್ಲಿ ಆರಂಭಿಸಲಾದ ನಾಲ್ಕನೆ ಘಟಕವಾಗಿದೆ. ಜಿಲ್ಲೆಯಲ್ಲಿ ದಾಖಲಾಗುವ ಗಂಭೀರ ಕ್ರಿಮಿನಲ್ ಪ್ರಕರಣಗಳ ಆರೋಪಿಗಳನ್ನು ಈ ಕೇಂದ್ರಕ್ಕೆ ತಂದು ತೀವ್ರ ವಿಚಾರಣೆಗೊಳಪಡಿಸಿ ಅವರ ಹೇಳಿಕೆಗಳನ್ನು ದಾಖಲಿ ಸಲಾಗುವುದು. ಆರೋಪಿಗಳನ್ನು ವಿಚಾರಿಸುವ ವೇಳೆ ಅದನ್ನು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಹೊರಗಿನಿಂದ ನೇರವಾಗಿ ವೀಕ್ಷಿಸಲು ಅಗತ್ಯದ ವೀಡಿಯೊ ಕಾನ್ಫರೆನ್ಸ್ ಸೌಕರ್ಯವನ್ನು ಈ ಘಟಕ ಹೊಂದಿದೆ.

  ಆರೋಪಿಗಳನ್ನು ವಿಚಾರಣೆಗೊಳ ಪಡಿಸುವ ಪೊಲೀಸ್ ಅಧಿಕಾರಿಗಳು ಮತ್ತು ಆರೋಪಿಗಳಿಂದ ಪೂರ್ಣ ಮಾಹಿತಿ ಹೊರಗಡೆ ಸೋರಿಕೆಯಾಗದಂತೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News