2,395 ಹೊಸ ಬೀಟ್‌ಗಳ ಅನುಷ್ಠಾನ

Update: 2017-04-25 18:43 GMT

ಮಂಗಳೂರು, ಎ.25: ಜನಸಂಪರ್ಕ ಮತ್ತು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಲು ‘ಪೊಲೀಸ್ ಬೀಟ್ ವ್ಯವಸ್ಥೆ’ (ಬೀಟ್ ಸಿಸ್ಟಮ್) ಅನುಷ್ಠಾನಗೊಳಿಸಿದೆ. ಪಶ್ಚಿಮ ವಲಯ ವ್ಯಾಪ್ತಿಯ ಜಿಲ್ಲೆಗಳಾದ ದ.ಕ., ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಹೊಸ ಬೀಟ್ ಪದ್ಧತಿಯನ್ನು ವ್ಯವಸ್ಥಿತವಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ಕೆಳಕಂಡಂತೆ ವಿಂಗಡಿಸಲಾಗಿದೆ.

ಈ ಹೊಸ ಬೀಟ್ ವ್ಯವಸ್ಥೆಯ ಮೂಲಕ ಸುಮಾರು 1,836 ಹೊಸ ಬೀಟ್‌ಗಳನ್ನು ಜಾರಿಗೊಳಿಸಲಾಗಿದೆ. ಅಲ್ಲದೇ ಪಶ್ಚಿಮ ವಲಯದಲ್ಲಿ 1,836 ಪೊಲೀಸ್ ಕಾನ್ಸ್‌ಟೆಬಲ್ ಮತ್ತು ಹೆಡ್ ಕಾನ್ಸ್‌ಟೆಬಲ್‌ಗಳಿಗೆ ಮೊಟ್ಟ ಮೊದಲನೆಯದಾಗಿ ಗ್ರಾಮಗಳನ್ನು ಹಂಚಿಕೆ ಮಾಡಿ ಹೊಸ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News