ತೆರೆದ ಕೊಳವೆಬಾವಿ ಇದ್ದಲ್ಲಿ ಮಾಹಿತಿ ನೀಡಿ: ಎಸ್ಪಿ

Update: 2017-04-25 18:44 GMT

ಮಂಗಳೂರು, ಎ.25: ಪ್ರಾಣಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿರುವ ತೆರೆದ ಬೋರ್‌ವೆಲ್‌ಗಳು, ಬಾವಿಗಳು ಕಂಡು ಬಂದಲ್ಲಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಅಥವಾ ಮೊಬೈಲ್ ಸಂದೇಶ ಅಥವಾ ವಾಟ್ಸ್ ಆ್ಯಪ್ ಮೂಲಕ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಮನವಿ ಮಾಡಿದ್ದಾರೆ.

ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಿಡಲಾಗುವುದು. ಸಂಬಂಧಪಟ್ಟ ಅಧಿಕಾರಿ ಗಳ ಮೂಲಕ ಅಂತಹ ತೆರೆದ ಬಾವಿಗಳನ್ನು ಮುಚ್ಚಲು ಹಾಗೂ ಮಾಲಕರಿಗೆ ನೋಟಿಸ್ ನೀಡುವ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News