ನೋಟು ರದ್ದತಿಯಿಂದ ನಕ್ಸಲರ ಸಮಸ್ಯೆ ತಡೆದಿದ್ದೇವೆ ಎನ್ನುವ ಕೇಂದ್ರದ ವಾದವನ್ನು ಪ್ರಶ್ನಿಸಿದ ರಾಹುಲ್
Update: 2017-04-26 13:34 IST
ಹೊಸದಿಲ್ಲಿ,ಎ. 26: ಹಳೆ ನೋಟು ನಿಷೇಧದಿಂದ ನಕ್ಸಲ್ ಸಮಸ್ಯೆಯನ್ನು ತಡೆದಿದ್ದೇವೆ ಎನ್ನುವ ಕೇಂದ್ರಸರಕಾರದ ವಾದವನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ನಕ್ಸಲ್ ದಾಳಿಯಲ್ಲಿ ಸಿಆರ್‌ಪಿಎಫ್ ಜವಾನರು ಮೃತಪಟ್ಟ ನಂತರ ಟ್ವೀಟ್ ಮಾಡಿ ಈ ಪ್ರಶ್ನೆಯನ್ನು ಕೇಂದ್ರಸರಕಾರದ ಮುಂದಿಟ್ಟಿದ್ದಾರೆ.
ನೋಟು ನಿಷೇಧ ನಕ್ಸಲಿಸಂನ್ನು ತಡೆದಿದೆ ಎನ್ನುವ ಹೇಳಿಕೆಯನ್ನು ನಾನು ಕೇಳಿದ್ದೆ. ಸರಕಾರದ ನಿಲುವಿನಲ್ಲಿ ಇನ್ನು ಬದಲಾವಣೆ ಆಗಬಹುದು ಎನ್ನುವ ನಿರೀಕ್ಷೆ ತನಗಿದೆ ಎಂದು ರಾಹುಲ್ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ನಕ್ಸಲ್ ದಾಳಿಯ ಹಿನ್ನೆಲೆಯಲ್ಲಿ ಮಾವೋಯಿಸ್ಟ್‌ಗಳನ್ನು ಎದುರಿಸುವ ನಿಲುವಿನಲ್ಲಿ ಬದಲಾವಣೆ ಮಾಡಲಾಗುವುದು ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಇದನ್ನು ಸೂಚಿಸಿ ರಾಹುಲ್ ಟ್ವೀಟ್ ಮಾಡಿದ್ದಾರೆ. ನೋಟು ಅಮಾನ್ಯೀಕರಣ ನಂತರ ನಕ್ಸಲ್ ಚಟುವಟಿಕೆಗಳುಕಡಿಮೆಯಾಗಲಿದೆ ಎಂದು ಕೇಂದ್ರಸರಕಾರ ವಾದಿಸಿತ್ತು.