×
Ad

ಎನ್‌ಜಿಒ ನೋಂದಣಿಗೆ ಶಾಸನಬದ್ಧ ಸ್ಥಾನಮಾನ: ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2017-04-26 20:00 IST

ಹೊಸದಿಲ್ಲಿ,ಎ.26:ಈಗಿರುವ ಮಾರ್ಗಸೂಚಿಗಳ ಬದಲಿಗೆ ಎನ್‌ಜಿಒ ನೋಂದಣಿ, ಮಾನ್ಯತೆ ಮತ್ತು ಹಣಕಾಸು ಸಂಗ್ರಹ ಪ್ರಕ್ರಿಯೆಗೆ ಶಾಸನಬದ್ಧ ಸ್ಥಾನಮಾನವನ್ನು ನೀಡುವಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಹಾಲಿ ಮಾರ್ಗಸೂಚಿಗಳು ಸಾಕಷ್ಟು ವ್ಯವಸ್ಥಿತವಾಗಿಲ್ಲ ಎಂದು ಅದು ಬೆಟ್ಟು ಮಾಡಿತು.

ಈ ಸಂಬಂಧ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವು,ತಾನು ಈಗಿರುವ ಮಾರ್ಗಸೂಚಿಗಳನ್ನೇ ಮುಂದು ವರಿಸಲು ಅಥವಾ ಶಾಸನದ ಮೂಲಕ ಎನ್‌ಜಿಒಗಳನ್ನು ನಿಯಂತ್ರಿಸಲು ಬಯಸಿದ್ದೇ ನೆಯೇ ಎನ್ನುವುದನ್ನು ಎಂಟು ವಾರಗಳಲ್ಲಿ ತಿಳಿಸುವಂತೆ ಕೇಂದ್ರಕ್ಕೆ ನಿರ್ದೇಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News