ಎಂಡೋ ಸಂತ್ರಸ್ತರಿಗೆ 56.76 ಕೋ.ರೂ. ಪರಿಹಾರಧನ

Update: 2017-04-26 18:32 GMT

 ಕಾಸರಗೋಡು, ಎ.26: ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಶಿಫಾರಸಿನಂತೆ ಎಂಡೋ ಸಂತ್ರಸ್ತರಿಗೆ 3ನೆ ಹಂತದ ಪರಿಹಾರಧನ ವಿತರಿಸಲು 56.76 ಕೋ.ರೂ. ಅನ್ನು ರಾಜ್ಯ ಸರಕಾರ ಬಿಡುಗಡೆಗೊಳಿಸಿದೆ. ಈ ಅನುದಾನ ಜಿಲ್ಲಾಧಿಕಾರಿ ಖಾತೆಗೆ ತಲುಪಿದ್ದು, ಎಂಡೋ ಸಂತ್ರಸ್ತರ ಯಾದಿಯಲ್ಲಿರುವ ಜಿಲ್ಲೆಯ 3,439 ಮಂದಿಗೆ ಧನಸಹಾಯ ಲಭಿಸಲಿದೆ. ಎಂಡೋ ಸಂತಸ್ತರಿಗೆ 3ನೆ ಹಂತದ ಪರಿಹಾರ ವಿತರಿಸಲು ಮಾ.23ರಂದು ಸೇರಿದ ರಾಜ್ಯ ಸಚಿವ ಸಂಪುಟ 56.76 ಕೋ.ರೂ. ಮಂಜೂರು ಮಾಡಲು ತೀರ್ಮಾನಿಸಿತ್ತು. ಆ ಹಣವನ್ನು ಸರಕಾರ ಈಗ ಬಿಡುಗಡೆಗೊಳಿಸಿದ್ದು, ಶೀಘ್ರವೇ ಸಂತ್ರಸ್ತರಿಗೆ ವಿತರಿಸುವಂತೆ ಸರಕಾರ ಸುತ್ತೋಲೆ ಹೊರಡಿಸಿದೆ.

 ಜಿಲ್ಲಾಧಿಕಾರಿ ಖಾತೆಗೆ ಸೇರಿದ ನಷ್ಟಪರಿಹಾರ ಮೊತ್ತವನ್ನು ಎಂಡೋ ಸಂತ್ರಸ್ತರಿಗೆ ಬ್ಯಾಂಕ್ ಖಾತೆ ಮೂಲಕ ವಿತರಿಸುವ ಕ್ರಮಕ್ಕೂ ಚಾಲನೆ ನೀಡಲಾಗಿದ್ದು, ಪ್ರಥಮ ಮತ್ತು ದ್ವಿತೀಯ ಕಂತು ಪರಿಹಾರ ಲಭಿಸಿದ ಎಂಡೋ ಸಂತ್ರಸ್ತರು ತಮ್ಮ ಬ್ಯಾಂಕ್ ಖಾತೆ ಕುರಿತ ಮಾಹಿತಿಯನ್ನು ಐಸಿಡಿಎಸ್ ಸೂಪರ್ವೈಸರ್ಗೆ ನೀಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News