×
Ad

ಮೇ ಸಾಹಿತ್ಯ ಮೇಳ : ಹೆಸರು ನೋಂದಾವಣೆಗೆ ಆಹ್ವಾನ

Update: 2017-04-27 00:20 IST

ಮಾನ್ಯರೆ,

ಲಡಾಯಿ ಪ್ರಕಾಶನ, ಗದಗ ಕವಿ ಪ್ರಕಾಶನ, ಕವಲಕ್ಕಿ ಹಾಗೂ ಚಿತ್ತಾರ ಕಲಾಬಳಗ, ಧಾರವಾಡ ಸಂಘಟನೆಗಳ ಸಹಯೋಗದಲ್ಲಿ ಮೇ 6 ಮತ್ತು 7ರಂದು ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ 4ನೆ ಮೇ ಸಾಹಿತ್ಯ ಮೇಳವನ್ನು ಸಂಘಟಿಸಿವೆ. ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸಾಹಿತಿಗಳಿಗೆ, ವಿದ್ಯಾರ್ಥಿಗಳಿಗೆ, ಕಲಾವಿದರಿಗೆ ಸಹೃದಯಿ ಆಸಕ್ತರಿಗೆ ಮುಕ್ತವಾದ ಅವಕಾಶವಿದೆ
  ಸಾಹಿತ್ಯ ಮೇಳದಲ್ಲಿ ಕರ್ನಾಟಕವಲ್ಲದೆ ಬೇರೆಬೇರೆ ರಾಜ್ಯಗಳಿಂದಲೂ ಐದು ನೂರಕ್ಕೂ ಹೆಚ್ಚು ಪ್ರಗತಿಪರ ಬರಹಗಾರರು ಭಾಗವಹಿಸುವ ನಿರೀಕ್ಷೆಯಿದೆ. ಸಮಾವೇಶದಲ್ಲಿ ಹಿರಿಯ ಮತ್ತು ಕಿರಿಯ ತಲೆಮಾರಿನ ಚಿಂತಕರು ಸಾಹಿತ್ಯ ಮೇಳದ ವಿವಿಧ ಗೋಷ್ಠಿಗಳಲ್ಲಿ ವಿಷಯ ಮಂಡಕರಾಗಿ ಮತ್ತು ಸಂವಾದಕರಾಗಿ ಕವನ ವಾಚಿಸುವ ಕವಿಗಳಾಗಿ ಭಾಗವಹಿಸಲಿದ್ದಾರೆ. ನಾಡಿನ ಎಲ್ಲ ಸಾಹಿತ್ಯಾಸ್ತಕರು ಈ ಮೇ ಸಾಹಿತ್ಯ ಮೇಳದಲ್ಲಿ ಭಾಗವಹಿಸಬೇಕು. ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರಗಳನ್ನು ಮೇ 2ರ ಒಳಗಾಗಿ ನೋಂದಾಯಿಸಿಕೊಳ್ಳಬೇಕು.
ಭಾಗವಹಿಸುವ ಪ್ರತಿನಿಧಿಗಳಿಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಗೋಷ್ಠಿಯ ಸಂವಾದಗಳಲ್ಲಿ ಮುಕ್ತವಾಗಿ ಭಾಗವಹಿಸಬಹುದು. ಯಾವುದೇ ನಿರ್ಬಂಧಗಳಿಲ್ಲ. ಆಗಮಿಸಿದ ಪ್ರತಿನಿಧಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಭಾಗವಹಿಸಿದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ಕೊಡಲಾಗುವುದು. ಆಸಕ್ತರು ಮೇ ಸಾಹಿತ್ಯ ಮೇಳದ ಸಂಘಟಕರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಲು ಕೋರಲಾಗಿದೆ.

ಸಂಪರ್ಕಿಸಿ: ಬಸೂ (9480286844), ಡಾ. ಅನುಪಮಾ (9480211320), ಬಿ. ಮಾರುತಿ (9880322020) ಡಿ.ಬಿ. ಗವಾನಿ(9482931100), ಬಿ. ಶ್ರೀನಿವಾಸ (9916332273), ಶಂಕರಗೌಡ ಸಾತ್ಮಾರ (9448942965)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News