ದಿಲ್ಲಿಯಲ್ಲೂ ಮುಸ್ಲಿಮ್ ಜಮಾಅತ್: ಕಾಂತಪುರಂ ಘೋಷಣೆ
ಹೊಸದಿಲ್ಲಿ,ಎ. ಕೇರಳ ಮುಸ್ಲಿಮ್‌ಜಮಾಅತ್‌ನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸುವ ಪ್ರಯುಕ್ತ ದಿಲ್ಲಿಮುಸ್ಲಿಂ ಜಮಾಅತ್ ಅಧಿಕೃತಘೋಷಣೆಯನ್ನು ಹೊಸದಿಲ್ಲಿ ಇಂಡಿಯನ್ ಇಸ್ಲಾಮಿಕ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಖಿಲಭಾರತಸುನ್ನಿ ಜಂಇಯ್ಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮಾಡಿದ್ದಾರೆ.
ದಿಲ್ಲಿಯ ವಿವಿಧ ಮಸೀದಿಗಳ ಇಮಾಮ್‌ಗಳು, ದಿಲ್ಲಿಯ ಕೆಲವು ಮುಸ್ಲಿಂಸಂಘಟನೆಗಳ ನಾಯಕರು, ವಿವಿಧ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿಭಾಗವಹಿಸಿದ್ದರು.
ಮೌಲಾನ ಝಾಕಿರ್ ಹುಸೈನ್ ನೂರಿ ಅಧ್ಯಕ್ಷತೆಯ ದಿಲ್ಲಿಮುಸ್ಲಿಂ ಜಮಾಅತ್ ಘಟಕದ ಅಡ್‌ಹಾಕ್ ಸಮಿತಿಯನ್ನು ಕಾಂತಪುರಂ ಈಸಂದರ್ಭದಲ್ಲಿ ಪ್ರಕಟಿಸಿದರು. ರಾಜ್ಯಾದ್ಯಂತ ಸೇವಾ ಚಟುವಟಿಕೆಗಳಿಗೆ ಮುಸ್ಲಿಮ್ ಜಮಾಅತ್ ನೇತೃತ್ವವನ್ನು ವಹಿಸಿಕೊಳ್ಳಲಿದೆ ಎಂದು ಕಾಂತಪುರಂ ಹೇಳಿದರು. ಸಂಘಟನೆಯ ಮುಂದಿನ ಕಾರ್ಯಚಟುವಟಿಕೆಗಳು ಮತ್ತು ನೀತಿ-ನಿಲುವುಗಳನ್ನು ಎಪಿ ಉಸ್ತಾದ್‌ರ ಪುತ್ರ ಡಾ. ಎ.ಪಿ. ಅಬ್ದುಲ್ ಹಕೀಂ ಅಝ್ಹರಿ ಸಭೆಗೆ ವಿವರಿಸಿದರು. ಕೇರಳದಲ್ಲಲ್ಲದೆ ಮುಸ್ಲಿಂ ಜಮಾಅತನ್ನು ಕರ್ನಾಟಕದಲ್ಲಿಯೂ ರಚಿಸಲಾಗಿದೆ. ಉಳಿದ ಎಲ್ಲ ರಾಜ್ಯಗಳಲ್ಲಿಯೂ ಮುಂದಿನ ಒಂದು ವರ್ಷದ ಒಳಗೆ ಮುಸ್ಲಿಮ್ ಜಮಾಅತ್ ರಚಿಸಲಾಗುವುದು ಎಂದು ಹಕೀಂ ಅಝ್ಹರಿ ತಿಳಿಸಿದರು. ಅಖಿಲಭಾರತ ಜಮಾಅತ್ ಸಮಿತಿಯನ್ನು ಕೂಡಾ ರೂಪಿಸಲಾಗುವುದು ಎಂದು ಅವರು ಸಭೆಗೆ ವಿವರಿಸಿದರು.