ಬಾಲಿವುಡ್ ನಟ ವಿನೋದ್ ಖನ್ನಾ ವಿಧಿವಶ

Update: 2017-04-27 07:00 GMT

ಮುಂಬೈ, ಎ.27: ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‌ನ ಹಿರಿಯ ನಟ ವಿನೋದ್ ಖನ್ನಾ ಗುರುವಾರ ವಿಧಿವಶರಾಗಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ 70 ವರ್ಷದ ಖನ್ನಾ ಮುಂಬೈನ ಗಿರ್ಗಾಂವ್‌ನಲ್ಲಿರುವ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಂಜಾಬ್‌ನ ಗುರುದಾಸ್‌ಪುರದ ಬಿಜೆಪಿಯ ಹಾಲಿ ಸಂಸದ ಖನ್ನಾ ಅಕ್ಟೋಬರ್ 6, 1946ರಲ್ಲಿ ಜನಿಸಿದ್ದರು. 1968 ರಿಂದ 2013ರ ನಡುವೆ 141 ಚಿತ್ರಗಳಲ್ಲಿ ನಟಿಸಿದ್ದಾರೆ.
ಮೇರೆ ಅಪ್ನ್ನೆ, ಮೇರಾ ಗಾಂವ್ ಮೇರಾ ದೇಶ್, ಗದ್ದರ್(1973) ಜೈಲ್ ಯಾತ್ರಾ, ಇಮ್ತಿಹಾನ್, ಇಂಕಾರ್, ಅಮರ್‌ಅಕ್ಬರ್ ಅಂಥೋನಿ, ರಾಜ್‌ಪುತ್, ಖುರ್ಬಾನಿ, ಕುದ್ರತ್, ದಯಾವನ್ ಸಹಿತ ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.

1968ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಖನ್ನಾ ಆರಂಭದ ದಿನಗಳಲ್ಲಿ ಪೋಷಕ ಪಾತ್ರ ಹಾಗೂ ಖಳನಟನಾಗಿ ನಟಿಸಿದ್ದರು. 1982ರಲ್ಲಿ ವೃತ್ತಿಜೀವನದಲ್ಲಿ ಯಶಸ್ಸಿನ ಶಿಖರ ಏರಿದ್ದ ಖನ್ನಾ ತನ್ನ ಅಧ್ಯಾತ್ಮಕ ಗುರು ಒಶೊ ರಜನೀಶ್‌ರ ಪ್ರಭಾವಕ್ಕೆ ಒಳಗಾಗಿ ತಾತ್ಕಾಲಿಕವಾಗಿ ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದ್ದರು.

ಐದು ವರ್ಷಗಳ ಬಿಡುವಿನ ಬಳಿಕ ಮತ್ತೆ ಚಿತ್ರರಂಗಕ್ಕೆ ವಾಪಸಾದ ಖನ್ನಾ ‘ಇನ್‌ಸಾಫ್’ ಹಾಗೂ ‘ಸತ್ಯಮೇವ ಜಯತೇ’ ಗಳಂತಹ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News