ಕಾಶ್ಮೀರಿ ಪ್ರತ್ಯೇಕತಾ ನಾಯಕಿ ಆಸಿಯಾ ಅಂದ್ರಾಬಿ ಬಂಧನ
ಹೊಸದಿಲ್ಲಿ,ಎ. 27: ಕಾಶ್ಮೀರದ ಪ್ರತ್ಯೇಕತಾ ವಾದಿ ನಾಯಕಿ ಆಸಿಯಾ ಅಂದ್ರಾಬಿಯವರನ್ನು ಶ್ರೀನಗರದಲ್ಲಿ ಬಂಧಿಸಲಾಗಿದೆ.ಅವರು ದುಕ್ತ್ರಾನ್ ಇ ಮಿಲ್ಲತ್ ಎನ್ನುವ ಸಂಘಟನೆಯ ನಾಯಕಿ ಆಗಿದ್ದಾರೆ. ಆಲ್ ಪಾರ್ಟಿ ಹುರಿಯತ್ ಕಾನ್ಫರೆನ್ಸ್ ಸದಸ್ಯೆ ಕೂಡಾ ಆಗಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಪೊಲೀಸರುಮತ್ತುಸೇನೆಯವಿರುದ್ಧ ಘರ್ಷಣೆಗೆ ನಾಯಕತ್ವ ನೀಡಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿದೆ. ಇವರ ಇಬ್ಬರು ಸಹಾಯಕರನ್ನು ಕೂಡಾ ಬಂಧಿಸಲಾಗಿದೆ. ಪ್ರಚೋದಾತ್ಮಕ ಭಾಷಣ, ಪಾಕ್ ರಾಷ್ಟ್ರಗೀತೆ ಆಲಾಪನೆ, ಪಾಕಿಸ್ತಾನದ ಪತಾಕೆ ಬೀಸಿದ್ದು, ಭಾರತದ ಸೇನೆಯ ವಿರುದ್ಧ ಹೇಳಿಕೆಗಳು, ಸಂಘರ್ಷಗಳಿಗೆ ನಾಯಕತ್ವ ವಹಿಸಿದ್ದು ಮುಂತಾದ ಆರೋಪಗಳನ್ನು ಅಸಿಯಾ ವಿರುದ್ಧ ಹೊರಿಸಲಾಗಿದೆ. ಪ್ರತ್ಯೇಕತಾ ವಾದಿಗಳು ಆಸಿಯಾರನ್ನು ಉಕ್ಕಿನ ಮಹಿಳೆ ಎಂದು ಕರೆಯುತಾರೆ. ಜೈಲಿನಲ್ಲಿರುವ ಹಿಝ್ಬುಲ್ ಮುಜಾಹಿದೀನ್ ನಾಯಕ ಆಶಿಕ್ ಹುಸೈನ್ ಫಕ್ತೂ ಆಸಿಯಾ ರ ಪತಿಯಾಗಿದೆ.
ಮಹಿಳೆಯರು ಬುರ್ಖಾಧರಿಸದಿರುವುದು ಮತ್ತು ಮಹಿಳೆ ವಿದ್ಯಾಭ್ಯಾಸವನ್ನು ಅನಿಸ್ಲಾಮಿಕ ಎಂದು ಆಸಿಯಾಹೇಳುತ್ತಿದ್ದರು. ಮುಂಬೈ ದಾಳಿಯ ಸೂತ್ರಧಾರ ಲಷ್ಕರ್ ನಾಯಕ ಹಾಫಿರ್ ಸಈದ್ ರ್ಯಾಲಿ ಯನ್ನು ಉದ್ದೇಶಿಸಿ ಫೋನ್ ಮೂಲಕ ಭಾಷಣ ಮಾಡಿದ್ದಕ್ಕಾಗಿ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.