ಎರಡು ಕಾರುಗಳು ಹಾದು ಹೋದರೂ ಬದುಕುಳಿದ ಮಗು !

Update: 2017-04-27 07:31 GMT

ಬೀಜಿಂಗ್, ಎ. 27: ಗುಲಾಬಿ ಬಣ್ಣದ ಶೂ ಧರಿಸಿದ ಪುಟ್ಟ ಹೆಣ್ಣುಮಗು ವಾಹನದಟ್ಟಣೆಯ ರಸ್ತೆಗಿಳಿದು ಹೋದವಳು ಮತ್ತೆ ಕೆಲವು ಕ್ಷಣ ಕಾಣೆಯಾಗುತ್ತಾಳೆ. ಮತ್ತೆ ಎರಡು ಕಾರುಗಳ ಅಡಿಯಿಂದ ಎದ್ದು ಬರುತ್ತಾಳೆ. ಈ ಅಚ್ಚರಿಯ ವೀಡಿಯೊ ಒಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಚೀನಾದ ವಾಹನ ಸಂಚಾರ ದಟ್ಟಣೆಯಿರುವ ರಸ್ತೆಯಲ್ಲಿ ಘಟನೆ ನಡೆದಿದೆ. ಹೆತ್ತವರ ಜೊತೆಗೆ ನಗರಕ್ಕೆ ಬಂದ ಮಗುಅವರ ಕಣ್ಣುತಪ್ಪಿಸಿ ರಸ್ತೆಗೆ ಇಳಿದಿತ್ತು. ಸಣ್ಣಮಗುಆದ್ದರಿಂದ ಕಾರಿನ ಚಾಲಕರಿಗೂ ಕಾಣಿಸಿರಲಾರದು. ಮಗುವಿನ ಮೇಲಿಂದ ಎರಡು ಕಾರುಗಳು ಹಾದುಹೋಗಿವೆ. ಆದರೆ ಮಗು ಕಾರಿನ ಅಡಿಯಿಂದ ಸುರಕ್ಷಿತವಾಗಿ ಹೊರಬಂದಿದ್ದಾಳೆ. ಸಮೀಪದ ಸಿಸಿಟಿವಿಯಲ್ಲಿ ಈದೃಶ್ಯಗಳು ದಾಖಲಾಗಿವೆ.

ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಬಿದ್ದಾಗ ಆದ ತರಚು ಗಾಯ ಮಾತ್ರ ಮಗುವಿಗೆ ಆಗಿತ್ತು. ಮಗು ಕಾರಿನಡಿಯಿಂದ ಎದ್ದು ಬರುವ ದೃಶ್ಯವನ್ನು ನೀವೂ ನೋಡಬಹುದು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News