×
Ad

ಕೋಬ್ರಾ ಕಮಾಂಡೋಗಳಿದ್ದ ಹೆಲಿಕಾಪ್ಟರ್ ಪತನ: 5 ಮಂದಿಗೆ ಗಾಯ

Update: 2017-04-27 13:15 IST

ರಾಯಪುರ್, ಎ.27: ಕೋಬ್ರಾ ಕಮಾಂಡೋಗಳು ಪ್ರಯಾಣಿಸುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಒಂದು ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿನ ಸಿಆರ್ ಪಿಎಫ್ ಶಿಬಿರದ ಸಮೀಪ ಪತನಗೊಂಡಿದ್ದು, ಅದರಲ್ಲಿದ್ದ ಐದು ಮಂದಿ ಗಾಯಗೊಂಡಿದ್ದಾರೆ.

ದಕ್ಷಿಣ ಬಸ್ತರ್ ನ ಚಿಂತಗುಫ ಶಿಬಿರದ ಸಮೀಪ ಅಪಘಾತ ಸಂಭವಿಸಿದ್ದು, ದುರ್ಘಟನೆಯಲ್ಲಿ ಕೋಬ್ರಾ ಪಡೆಯ ಅರಣ್ಯ ಸಂಗ್ರಾಮ ಘಟಕದ ಇಬ್ಬರು ಅಧಿಕಾರಿಗಳು, ಒಬ್ಬ ಕಮಾಂಡೋ ಹೆಲಿಕಾಪ್ಟರ್ ನ ಪೈಲಟ್ ಹಾಗೂ ಇಂಜಿನಿಯರ್  ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಗಾಗಿ ಸಿ ಆರ್ ಪಿ ಎಫ್ ಈ ಬೆಲ್‌ಲ್-206 ಹೆಲಿಕಾಪ್ಟರ್ ಅನ್ನು ಲೀಸ್ ಗೆ ಪಡೆದುಕೊಂಡಿತ್ತು.

ಗಾಯಾಳುಗಳೆಲ್ಲರೂ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ. ಹೆಲಿಕಾಪ್ಟರ್ ಪತನಕ್ಕೆ ಕಾರಣವೇನೆಂದು ತಿಳಿಯಲು ತನಿಖೆ ನಡೆಯಲಿದೆ. ಒಂದು ಮೂಲದ ಪ್ರಕಾರ ತಾಂತ್ರಿಕ ಸಮಸ್ಯೆಯೇ ಪತನಕ್ಕೆ ಕಾರಣ ಎನ್ನಲಾಗಿದೆ. ಅಪಘಾತದಿಂದಾಗಿ ಹೆಲಿಕಾಪ್ಟರ್ ನ ರೋಟೊರ್ ಬ್ಲೇಡ್ ಹಾನಿಗೀಡಾಗಿದೆ. ಕೋಬ್ರಾ ಕಮಾಂಡೋಗಳು ಸಭೆಯೊಂದರಲ್ಲಿ ಭಾಗವಹಿಸಲು ಹೊರಟಿದ್ದಾಗ ಈ ಅಪಘಾತ ಸಂಭವಿಸಿದೆ.

ಈ ಸ್ಥಳದ ಸಮೀಪದಲ್ಲಿಯೇ ಇರುವ ಬುರ್ಕಪಾಲ್ ಎಂಬಲ್ಲಿ ನಕ್ಸಲ್ ದಾಳಿಯಲ್ಲಿ ಸೋಮವಾರವಷ್ಟೇ 25 ಸಿ ಆರ್ ಪಿ ಎಫ್ ಜವಾನರು ಹತರಾಗಿದ್ದನ್ನು ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News