ಹಿಮದಡಿ 47ದಿನ ಹುದುಗಿ ಹೋಗಿದ್ದಾತ ಬದುಕಿ ಬಂದ !

Update: 2017-04-27 08:19 GMT

ಮೌಂಟ್ ಎವರೆಸ್ಟ್,ಎ. 27: ತೈವಾನ್‌ನ ಲಿಯಾಂಗ್ ಶೇಂಗ್ಯುಗೆ ಆತನ ಅಜ್ಜಿ, ಕಾಲುಗಳಿಗೆ ಹುಳು ಹಿಡಿದು, ತಲೆಯ ಕೂದಲು ಉದುರಿಹೋದ, ನಿರ್ಜನ ಸ್ಥಳದಲ್ಲಿ ಒಂಟಿಯಾಗುವವರ ಕಥೆಯನ್ನು ಹಿಂದೆ ಹೇಳಿಕೊಟ್ಟಿದ್ದರು. ಇದು ಆತನ ಜೀವನದಲ್ಲಿ ನಿಜವಾಗಿ ಘಟಿಸಿದೆ. ಹಿಮಾಲಯದಲ್ಲಿ ಟ್ರಕ್ಕಿಂಗ್ ನಡೆಸುತ್ತಿದ್ದಾಗ ನಿರ್ಜನ ಪ್ರದೇಶದಲ್ಲಿ 47ದಿವಸಗಳ ಕಾಲ ಒಂಟಿಯಾಗಿ ಹಿಮದಡಿಸಿಲುಕಿದ್ದ ಲಿಯಾಂಗ್ ಶೇಂಗ್ಯು ಮಾತ್ರ ಬದುಕಿ ಉಳಿದಿದ್ದಾನೆ. ಆತನ ಗೆಳತಿ ತೀರಿಹೋಗಿದ್ದಾಳೆ. ತೈವಾನ್‌ನ ಲಿಯಾಂಗ್ ಶೇಂಗ್ಯು ಮತ್ತು ಗೆಳತಿ ಲ್ಯೂ ಶೆನ್ ಹಿಮಾಲಯ ಕಣಿವೆಗೆ ಟ್ರಕ್ಕಿಂಗ್‌ಗೆ ಬಂದಿದ್ದರು. ಇಬ್ಬರೂ ದೊಂಗ್ವಾ ವಿಶ್ವವಿದ್ಯಾನಿಲಯದ ಒಂದನೆ ವರ್ಷದ ಪದವಿ ವಿದ್ಯಾರ್ಥಿಗಳಾಗಿದ್ದಾರೆ. ಹಿಮಪಾತದಿಂದಾಗಿ ಟ್ರಕ್ಕಿಂಗ್ ವೇಳೆ ಅವರು ಇಬ್ಬರೂ ಕಳೆದು ಹೋಗಿದ್ದರು. ಇವರ ಹೆತ್ತವರು ದೂರು ನೀಡಿದ ಹಿನ್ನೆಲೆಯಲ್ಲಿಕಳೆದ ಒಂದೂವರೆ ತಿಂಗಳಿನಿಂದ ಹುಡುಕಲಾಗುತ್ತಿತ್ತು.

ಕಳೆದ ದಿವಸ ಹಿಮ ಆವರಿಸಿಕೊಂಡಿದ್ದ ಇಬ್ಬರನ್ನು ಸ್ಥಳೀಯ ನಿವಾಸಿಗಳುನೋಡಿ ಪೊಲೀಸರಿಗೆ ತಿಳಿಸಿದ್ದರು. ಕೂಡಲೆ ಅಧಿಕಾರಿಗಳು ರಕ್ಷಣಾ ಕಾರ್ಯಕೈಗೊಂಡರು. ತೈವಾನ್‌ನ ಲಿಯಾಂಗ್ ಶೇಂಗ್ಯು ಮತ್ತು ಆತನ ಗೆಳತಿಯನ್ನು ಹೆಲಿಕಾಪ್ಟರ್ ಮೂಲಕಅವರು ಬಿದ್ದಿದ್ದಲ್ಲಿಂದ ಎತ್ತಲಾಯಿತು. ಆದರೆ ಶೇಂಗ್ಯು ಬದುಕಿ ಉಳಿದಿದ್ದಾನೆ. ಮೂರುದಿವಸಗಳ ಹಿಂದೆ ಆತನ ಗೆಳತಿ ಮೃತಪಟ್ಟಿದ್ದಳು. ಶೇಂಗ್ಯುನ ಕೂದಲು ಉದುರಿಹೋಗಿತ್ತು. ಕಾಲು ಹುಳುತಿಂದಿದ್ದವು.ಆಸ್ಪತ್ರೆಯಲ್ಲಿ

ಚೇತರಿಸಿಕೊಳ್ಳುತ್ತಿರುವ ಆತ ಇದೀಗ ಅಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News