ಎ.30: 2ನೆ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಸಿದ್ಧತೆ

Update: 2017-04-27 18:37 GMT

ಮಂಗಳೂರು, ಎ.27: ರಾಷ್ಟ್ರೀಯ ಪಲ್ಸ್ ಪೋಲಿಯೊದ 2ನೆ ಸುತ್ತಿನ ಕಾರ್ಯಕ್ರಮ ಎ.30ರಂದು ದ.ಕ. ಜಿಲ್ಲಾದ್ಯಂತ ನಡೆಯಲಿದ್ದು, ಇದರ ಯಶಸ್ಸಿಗಾಗಿ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್ ಹೇಳಿದ್ದಾರೆ.

 ತನ್ನ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 5 ವರ್ಷದೊಳಗಿನ 1,64,965 ಮಕ್ಕಳಿದ್ದು, ಅವರೆಲ್ಲರಿಗೂ 921 ಕೇಂದ್ರಗಳಲ್ಲಿ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಗುರಿ ಹಾಕಲಾಗಿದೆ ಎಂದರು. ಜಿಲ್ಲೆಯಲ್ಲಿ 3,816 ಸ್ವಯಂ ಸೇವಕರು, 199 ಮೇಲ್ವಿ ಚಾರಕರು, ವೈದ್ಯಾಧಿ ಕಾರಿಗಳು, ಸಿಬ್ಬಂದಿ ವರ್ಗ ಕಾರ್ಯ ನಿರ್ವಹಿಸಲಿದ್ದಾರೆೆ. ಎ.30 ರಂದು ಬೆಳಗ್ಗೆ 10ಕ್ಕೆ ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಪೋಲಿಯೊ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಎ.2ರಂದು ನಡೆದ ಮೊದಲ ಸುತ್ತಿನ ಕಾರ್ಯಕ್ರಮದಲ್ಲಿ ಶೇ.100 ದಾಖಲೆಯ ಗುರಿ ಸಾಧಿಸಲಾಗಿದೆ ಎಂದು ಡಾ. ರಾಮಕೃಷ್ಣ ರಾವ್ ಹೇಳಿದರು.

ಎ.30ರಂದು ಲಸಿಕೆ ಹಾಕಿಸದವರಿಗಾಗಿ ನಪಂ, ಪುರಸಭೆ, ನಗರಸಭೆ, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೇ 1,2,3 ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮೇ 1,2ರಂದು ಲಸಿಕೆ ಹಾಕಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News