×
Ad

ವಾಣಿಜ್ಯ ನೌಕೋದ್ಯಮ,ವಾಯುಸೇವೆ ಕ್ಷೇತ್ರಗಳಲ್ಲಿ ನಾಲ್ಕು ಒಪ್ಪಂದಗಳಿಗೆ ಭಾರತ-ಸೈಪ್ರಸ್ ಅಂಕಿತ

Update: 2017-04-28 22:18 IST

ಹೊಸದಿಲ್ಲಿ,ಎ.28: ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಸೈಪ್ರಸ್ ಅಧ್ಯಕ್ಷ ನಿಕೋಸ್ ಅನಸ್ಟಾಸಿಯಾಡೆಸ್ ನೇತೃತ್ವದ ನಿಯೋಗ ಮಟ್ಟದ ಮಾತುಕತೆಗಳ ಬಳಿಕ ವಾಣಿಜ್ಯ ನೌಕೋದ್ಯಮ ಮತ್ತು ವಾಯುಸೇವೆ ಸೇರಿದಂತೆ ನಾಲ್ಕು ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಿದವು.

2017-2020ರ ಅವಧಿಗೆ ಸಂಸ್ಕೃತಿ,ಶಿಕ್ಷಣ ಮತ್ತು ವೈಜ್ಞಾನಿಕ ಸಹಕಾರ ಕುರಿತು ಕಾರ್ಯಕಾರಿ ಕಾರ್ಯಕ್ರಮವೊಂದಕ್ಕೂ ಉಭಯ ರಾಷ್ಟ್ರಗಳು ಸಹಿ ಹಾಕಿದವು.

ಇದಕ್ಕೂ ಮುನ್ನ ಬೆಳಿಗ್ಗೆ ರಾಷ್ಟ್ರಪತಿ ಭವನದ ಆವರಣದಲ್ಲಿ ಸೈಪ್ರಸ್ ಅಧ್ಯಕ್ಷರಿಗೆ ಸಾಂಪ್ರದಾಯಿಕ ಗೌರವ ರಕ್ಷೆಯನ್ನು ನೀಡಲಾಯಿತು.

ರಾಜ್‌ಘಾಟ್‌ಗೆ ತರಳಿ ಮಹಾತ್ಮಾ ಗಾಂಧಿಯವರಿಗೆ ಪುಷ್ಪಾಂಜಲಿಗಳನ್ನು ಸಲ್ಲಿಸಿದ ಅನಸ್ಟಾಸಿಯಾಡೆಸ್ ಅವರು ರಾಷ್ಟ್ರಪಿತನನ್ನು ಸೈಪ್ರಸ್‌ನ ಆಧ್ಯಾತ್ಮಿಕ ನಾಯಕ ಮತ್ತು ಅದರ ಸ್ವಾತಂತ್ರ ಹೋರಾಟದ ಸ್ಫೂರ್ತಿ ಎಂದು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News