ಸ್ನಾತಕೋತ್ತರ ವಿದ್ಯಾರ್ಥಿವೇತನ: ಅಧಿಸೂಚನೆ ಪ್ರಕಟ
Update: 2017-04-28 22:26 IST
ಹೊಸದಿಲ್ಲಿ, ಎ.28: ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲಯಡ್ ಸೈನ್ಸನ್ (ಐಎನ್‌ಎಂಎಎಸ್) ಸಂಸ್ಥೆಯು ಸಂಶೋಧನಾ ಸಹಾಯಕ (ಆರ್‌ಎ) ಮತ್ತು ಕಿರಿಯ ಸಂಶೋಧನಾ ಫೆಲೋಶಿಪ್ (ಜೆಆರ್‌ಎಫ್)ಗೆ ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಪ್ರಕಟಿಸಿದೆ.
ಆರ್‌ಎ 3 ಹುದ್ದೆ ಮತ್ತು ಜೆಆರ್‌ಎಫ್ 14 ಹುದ್ದೆಗಳಿವೆ. ಆರ್‌ಎಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 40000 ರೂ. (ಜೊತೆಗೆ ಮನೆಭತ್ಯೆ), ಜೆಆರ್‌ಎಫ್‌ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25000 ರೂ.(ಜೊತೆಗೆ ಮನೆಭತ್ಯೆ)ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಡಿಆರ್‌ಡಿಒ.ಜಿಒವಿ.ಇನ್ ವೆಬ್‌ಸೈಟ್ ಸಂಪರ್ಕಿಸುವಂತೆ ತಿಳಿಸಲಾಗಿದೆ.