×
Ad

"ಜೀವಂತ ಚರ್ಮಸುಲಿಯುತ್ತೇನೆ": ಪೋಲಿಸ್ ಅಧಿಕಾರಿಗೆ ಬಿಜೆಪಿ ಸಂಸದೆಯ ಬೆದರಿಕೆ

Update: 2017-04-29 13:17 IST

ಹೊಸದಿಲ್ಲಿ,ಎ. 29: ಉತ್ತರಪ್ರದೇಶದಲ್ಲಿ ಅಧಿಕಾರಿಗಳ ವಿರುದ್ಧ ಬಿಜೆಪಿ ಜನಪ್ರತಿನಿಧಿಗಳ ಬೆದರಿಕೆ ಹೆಚ್ಚಳವಾಗುತ್ತಿದೆ. ಪೊಲೀಸ್ ಅಧಿಕಾರಿಗೆ ಫೋನ್ ಮಾಡಿ ಜೀವಂತ ಚರ್ಮ ಸುಲಿಯುವೆ ಎಂದು ಬಿಜೆಪಿ ಸಂಸದೆ ಪ್ರಿಯಾಂಕಾ ಸಿಂಗ್ ರಾವತ್ ಬೆದರಿಕೆ ಹಾಕಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಯೂ ಅವರು ಬೆದರಿಕೆಯನ್ನು ಮುಂದುವರಿಸಿದ್ದಾರೆ. ಈ ಹಿಂದೆ ಬ್ಯಾಂಕ್ ಮ್ಯಾನೇಜರ್‌ರನ್ನು ಬಿಜೆಪಿ ಶಾಸಕ ಅಪಹರಿಸಿ ಹೊಡೆದಿದ್ದ ಆರೋಪದ ಬೆನ್ನಿಗೆ ಪ್ರಿಯಾಂಕಾರ ದಾದಾಗಿರಿ ಬೆಳಕಿಗೆ ಬಂದಿದೆ.

ಕೊಲೆಪ್ರಕರಣದ ಕುರಿತು ವಿಚಾರ ತಿಳಿದುಕೊಳ್ಳಲು ಎಎಸ್ಪಿಯೊಬ್ಬರನ್ನು ಸಂಪರ್ಕಿಸಿದಾಗ ಅವರು ನಿರ್ಲಕ್ಷಿಸಿದರೆಂದು ಅರೋಪಿಸಿ ಸಂಸದೆ ಬೆದರಿಕೆ ಹಾಕಿದ್ದಾರೆ. ಕೇಂದ್ರದಲ್ಲಿನಮ್ಮ ಮೋದಿ ಸರಕಾರ, ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ. ಹಿಂದಿನ ಸರಕಾರದ ಅವಧಿಯಲ್ಲಿ ಪೊಲೀಸರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದರು. ಅದನ್ನು ಮುಂದುವರಿಸಿದರೆ ಜೀವಂತ ಚರ್ಮಸುಲಿಯುವೆ ಎಂದು ಪತ್ರಿಕಾಗೋಷ್ಠಿಯಲ್ಲಿಯೂ ಸಂಸದೆ ಹೇಳಿದ್ದಾರೆ.

ಲಕ್ನೊದ ಬಾರಬಂಕ್‌ನ ಸಂಸದೆ ಪ್ರಿಯಾಂಕಾ ಆಗಿದ್ದಾರೆ. ಬೆದರಿಕೆ ಇದೆ ಎಂದು ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ಕುಮಾರ್ ರಜೆಯಲ್ಲಿ ಹೋಗಿದ್ದಾರೆ. ಬರೇಲಿ ಶಾಸಕ ಕೇಸರ್ ಸಿಂಗ್ ಬ್ಯಾಂಕ್ ಮೆನೇಜರ್‌ರನ್ನು ಅಪಹರಿಸಿ ಹೊಡೆದಿದ್ದಾರೆ ಎಂದು ಕಳೆದ ದಿವಸ ವರದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News