×
Ad

ವೃದ್ಧಾಶ್ರಮಕ್ಕೆ ಹೋಗಲು ನಿರಾಕರಿಸಿದ ತಾಯಿಯ ತಲೆಗೆ ಬಡಿದು ಕೊಂದ ಪುತ್ರ !

Update: 2017-04-29 13:25 IST

ಹೊಸದಿಲ್ಲಿ,ಎ. 29: ವೃದ್ಧ ಸದನಕ್ಕೆ ಹೋಗಲು ನಿರಾಕರಿಸಿದ 76ವರ್ಷ ವಯಸ್ಸಿನ ಮಹಿಳೆಯನ್ನು ಸ್ವಂತ ಪುತ್ರನೇ ಹೊಡೆದು ಕೊಂದ ಘಟನೆ ದಿಲ್ಲಿಯಲ್ಲಿ ನಡೆದಿದೆ. ದಿಲ್ಲಿ ಸಾಗರ್‌ಪುರದ ಲಕ್ಷ್ಮಣ್ ಕುಮಾರ್(48) ತಾಯಿಯನ್ನುಕೊಂದ ಧೂರ್ತ ಪುತ್ರನಾಗಿದ್ದಾನೆ. ತಾಯಿಯ ತಲೆಗೆ ಹೊಡೆದು ಉಸಿರುಗಟ್ಟಿಸಿ ಕೊಂದು ಹಾಕಿದ್ದೇನೆ ಎಂದು ಆತ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಎಪ್ರಿಲ್ 25ರಂದು ಘಟನೆ ನಡೆದಿತ್ತು.ತಾಯಿಗೆ ಚಿಕಿತ್ಸೆ ಕೊಡಿಸುವ ಆರ್ಥಿಕ ಸಾಮರ್ಥ್ಯ ತನಗಿಲ್ಲ. ಆದ್ದರಿಂದ ಮನೆಬಿಟ್ಟು ಹೋಗಿ ಎಂದು ನಿರುದ್ಯೋಗಿಯಾಗಿರುವ ಲಕ್ಷ್ಮಣ್ ಕುಮಾರ್ ತಾಯಿಗೆ ತಾಕೀತು ಮಾಡಿದ್ದ. ಆದರೆ ತಾನು ಎಲ್ಲಿಗೆ ಹೋಗಬೇಕೆಂದು ತಾಯಿ ದೈನ್ಯತೆಯಲ್ಲಿ ಕೇಳಿದ್ದಾರೆ. ಒಂದೋ ವೃದ್ಧಾಶ್ರಮ, ಅಥವಾ ಬೇರೆಯಾವುದಾದರೂ ಆಶ್ರಮ, ಅಲ್ಲದಿದ್ದರೆ ಫರಿದಾಬಾದ್‌ನಲ್ಲಿರುವ ಇನ್ನೊಬ್ಬ ಪುತ್ರನ ಬಳಿಗೆ ಹೋಗಲು ಲಕ್ಷ್ಮಣ್ ಹೇಳಿದ್ದಾನೆ. ಆದರೆತಾಯಿ ಮನೆ ಬಿಟ್ಟು ಹೋಗಲು ಸಿದ್ಧರಾಗಲಿಲ್ಲ. ಇದು ಲಕ್ಷ್ಮಣ್‌ನ ಕೋಪಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ವರ್ಷ ಮೊದಲು ಪತ್ನಿ ಅತನನ್ನು ತೊರೆದು ಹೋಗಿದ್ದಾಳೆ. ಆ ಮೇಲೆ ತಾಯಿ ಜೊತೆ ವಾಸಿಸುತ್ತಿದ್ದಆತ ದಿನಾಲೂ ತಾಯಿಯೊಂದಿಗೂ ಜಗಳವಾಡುತ್ತಿದ್ದ ಎಂದು ನೆರೆಯವರು ಸಾಕ್ಷಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News